ಬಿಹಾರದ ಅರಾರಿಯಾದಲ್ಲಿ ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಿ ವ್ಯಕ್ತಿಯೊಬ್ಬನ ಖಾಸಗಿ ಅಂಗಕ್ಕೆ ಕೆಲವು ವ್ಯಕ್ತಿಗಳು ಸೇರಿ ಮೆಣಸಿನ ಪುಡಿ ತುಂಬಿರುವ ಘಟನೆ ಜರುಗಿದೆ.
ಪಾನ್ ಖಾಶೆಂಪುರ್: ಶಾಲಾ ಮಕ್ಕಳ ಸಮಸ್ಯೆ ಆಲಿಸಿದ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್
ಘಟನೆಗೆ ಸಂಬಂಧಿಸಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಅರಾರಿಯಾದ ಇಸ್ಲಾಂ ನಗರದಲ್ಲಿ ಕಳ್ಳತನ ಮಾಡುತ್ತಿದ್ದಾನೆ ಎಂದು ಆರೋಪಿಸಿ ವ್ಯಕ್ತಿಗಳ ಗುಂಪೊಂದು ವ್ಯಕ್ತಿಯೊಬ್ಬನ ಖಾಸಗಿ ಅಂಗಕ್ಕೆ ಮೆಣಸಿನ ಪುಡಿಯನ್ನು ತುಂಬಿದ್ದಾರೆ. ಇದರ ವಿಡಿಯೋ ಕೆಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ವ್ಯಕ್ತಿಯ ಕೈಗಳನ್ನು ಹಿಂದಕ್ಕೆ ಕಟ್ಟಿ, ಅವನ ಪ್ಯಾಂಟ್ ಬಿಚ್ಚಿ ಕೆಲವು ಪುರುಷರು ಆತನನ್ನು ಮೊಣಕಾಲುಗಳ ಮೇಲೆ ಬಾಗಿಸುವಂತೆ ಒತ್ತಾಯಿಸುತ್ತಿರುವುದು ಸೆರೆಯಾಗಿದೆ
ಆರೋಪಿಗಳಲ್ಲಿ ಒಬ್ಬ ಕಳ್ಳನ ಬೆನ್ನಿನ ಮೇಲೆ ಮೆಣಸಿನ ಪುಡಿ ಸುರಿದು ಪೆನ್ಸಿಲ್ ಬಳಸಿ ಗುದನಾಳದಲ್ಲಿ ತುಂಬಿಸಿರುವುದಾಗಿ ತಿಳಿದು ಬಂದಿದೆ. ಅನೇಕರು ಸೇರಿ ಆತನನ್ನು ಸಂಪೂರ್ಣ ತಪಾಸಣೆ ನಡೆಸುವುದು ಕೂಡ ವಿಡಿಯೋದಲ್ಲಿ ಸೆರೆಯಾಗಿದೆ.
ಮಾಜಿಕ ಮಾಧ್ಯಮದಲ್ಲಿ ಎಲ್ಲರ ಗಮನ ಸೆಳೆದ ಈ ವಿಡಿಯೋದಲ್ಲಿ ಗುರುತಿಸಲಾದ ಮೊಹಮ್ಮದ್ ಸಿಫತ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.