ಹೀರೋಯಿನ್ ಮಾಡ್ತೀನಿ ಅಂತ ಲಕ್ಷಾಂತರ ರೂಪಾಯಿ ವಂಚಿಸಿದ ಆರೋಪದ ಮೇಲೆ ಕನ್ನಡದ ‘ರಣಾಕ್ಷ’ ಸಿನಿಮಾದ ನಿರ್ಮಾಪಕ ಶಿವರಾಮ್ ಮೇಲೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
2023ರಲ್ಲಿ ಸಿನಿಮಾದ ಶೂಟಿಂಗ್ ಆರಂಭಿಸಿದ ನಿರ್ಮಾಫಕ ಶಿವರಾಜ್ ಚಿತ್ರಕ್ಕೆ ಪೂಜಾ ಎಂಬುವವರನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದರು. ಮಗಳ ಸಿನಿಮಾದ ಶೂಟಿಂಗ್ ನೋಡಲು ಸೆಟ್ ಬಂದಿದ್ದ ತಾಯಿ ಸುನಂದಾಗೂ ಚಿತ್ರದ ನಿರ್ಮಾಪಕ ಶಿವರಾಮ್ ಪರಿಚಯವಾಗಿದೆ. ಶೂಟಿಂಗ್ಗೆ ಆರ್ಥಿಕವಾಗಿ ಸಮಸ್ಯೆ ಆಗಿದೆ ಎಂದು ನಟಿಯ ತಾಯಿಯ ಬಳಿ 5 ಲಕ್ಷ ರೂ.ವನ್ನು ಶಿವರಾಮ್ ಪಡೆದಿರುತ್ತಾರೆ. ಆ ನಂತರ ಚಿತ್ರದ ಶೂಟಿಂಗ್ ಕೂಡ ನಡೆಸಿದ್ದಾರೆ. ಆದ್ರೆ ಬಳಿಕ ಸಮಯಕ್ಕೆ ಸರಿಯಾಗಿ ಆ ಹಣವನ್ನು ಶಿವರಾಮ್ ಹಿಂದಿರುಗಿಸಿರುತ್ತಾರೆ.
ಕೆಲವು ದಿನಗಳ ಬಳಿಕ ಮತ್ತೆ ನಟಿಯ ತಾಯಿಗೆ ಕರೆ ಮಾಡಿ ಇನ್ನೊಂದಿಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ವೇಳೆ ಮಹಿಳೆಯ ಬಳಿಯಿದ್ದ 575 ಗ್ರಾಂ ಚಿನ್ನವನ್ನು ಶಿವರಾಮ್ಗೆ ನೀಡಿದ್ದಾರೆ. ಶ್ಯೂರಿಟಿಗಾಗಿ ಎರಡು ಚೆಕ್ಗಳನ್ನು ನಟಿಯ ತಾಯಿಗೆ ನೀಡಿದ್ದರು. ಆದರೆ ಚೆಕ್ ಅವಧಿ ಮುಗಿದಿದ್ದರೂ ಚಿನ್ನಾಭರಣ ನೀಡದೇ ನಿರ್ಮಾಪಕ ವರಸೆ ಬದಲಿಸಿದ್ದಾರೆ. ಈ ಹಿನ್ನೆಲೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಶಿವರಾಮ್ ವಿರುದ್ಧ ನಟಿಯ ತಾಯಿ ಸುನಂದಾ ಎಫ್ಐಆರ್ ದಾಖಲಿಸಿದ್ದಾರೆ.