ಗಾಂಧಿನಗರ: ದಲಿತ ಯುವಕನ ಮೇಲೆ ಹಲ್ಲೆ ಹಾಗೂ ಆತನ ಬಾಯಿಗೆ ಚಪ್ಪಲಿ ತುರುಕಿದ ಆರೋಪದ ಮೇಲೆ ಮಹಿಳಾ ಉದ್ಯಮಿ (Woman Businessman) ಜೊತೆ 6 ಮಂದಿಯ ವಿರುದ್ಧ ಗುಜರಾತ್ನ (Gujrat) ಮೊರ್ಬಿ ನಗರದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೃತ್ಯ ಎಸಗಿದ ಮಹಿಳಾ ಉದ್ಯಮಿಯನ್ನು ವಿಭೂತಿ ಪಟೇಲ್ ಅಕಾ ರಾಣಿಬಾ ಎಂದು ಗುರುತಿಸಲಾಗಿದೆ. ಈ ಸಂಬಂಧ ಸಂತ್ರಸ್ತ ನಿಲೇಶ್ ದಲ್ಸಾನಿಯಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಮೊರ್ಬಿ ನಗರದ ಪೊಲೀಸರು ಇಂದು ಮಹಿಳೆ ವಿಭೂತಿ ಪಟೇಲ್ ಅಕಾ ರಾಣಿಬಾ ಮತ್ತು ಆಕೆಯ ಸಹೋದರ ಓಂ ಪಟೇಲ್ ಮತ್ತು ಮ್ಯಾನೇಜರ್ ಸೇರಿದಂತೆ ಇತರರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ (ಎಸ್ಸಿ/ಎಸ್ಟಿ ಸೆಲ್) ಪ್ರತಿಪಾಲ್ಸಿನ್ಹ್ ಝಾಲಾ ಹೇಳಿದರು.
ದೀರ್ಘಕಾಲದ ಸಂದಿ ನೋವು & ವಯಸ್ಸಾದಂತೆ ಈ ನೋವುಗಳು ನಿಮ್ಮನ್ನ ಕಾಡುತ್ತಿದ್ದರೆ: ಇಲ್ಲಿದೆ ಉಚಿತ – ಸಲಹೆ, ಸರಳ ಚಿಕಿತ್ಸೆ
ವಿಭೂತಿ ಪಟೇಲ್ ಅಕಾ ರಾಣಿಬಾ ಕಂಪನಿಯಲ್ಲಿ 21 ವರ್ಷದ ದಲಿತ ಯುವಕ 15 ದಿನ ಕೆಲಸ ಮಾಡಿದ್ದನು. ಅಂತೆಯೇ ಆತ ಸಂಬಳಕ್ಕೆ ಬೇಡಿಕೆ ಇಟ್ಟಿದ್ದಕ್ಕಾಗಿ ಮಹಿಳಾ ಉದ್ಯಮಿಯು ಯುವಕನ ಬಾಯಿಗೆ ತುರುಕಿ ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾಳೆ. ಈ ಘಟನೆ ಬುಧವಾರ ನಡೆದಿದೆ ಎಂದು ಅವರು ಹೇಳಿದರು.
ದೂರಿನಲ್ಲೇನಿದೆ..?: ಕಳೆದ ಅಕ್ಟೋಬರ್ನಲ್ಲಿ ರಾಣಿ ಬಾ ಅವರು ತಮ್ಮ ಸಂಸ್ಥೆಗೆ ನಿಲೇಶ್ ದಲ್ಸಾನಿಯಾನನ್ನು ನೇಮಕ ಮಾಡಿಕೊಂಡಿದ್ದರು. ಅಂತೆಯೇ ಟೈಲ್ಸ್ ಮಾರ್ಕೆಟಿಂಗ್ ಕೆಲಸಕ್ಕಾಗಿ ನಿಲೇಶ್ನನ್ನು ನಿಯೋಜಿಸಲಾಗಿತ್ತು. ಆತನಿಗೆ 12 ಸಾವಿರ ರೂಪಾಯಿ ಸಂಬಳ ಕೊಡೋದಾಗಿ ಹೇಳಲಾಗಿತ್ತು. ಆದರೆ ಸಂಬಳವನ್ನೇ ಕೊಟ್ಟಿರಲಿಲ್ಲ ಎಂದು ಎಫ್ಐಆರ್ ನಲ್ಲಿ ವಿವರಿಸಲಾಗಿದೆ.