ಬೆಂಗಳೂರು:– ಯುವತಿ ಮೇಲೆ ಆತ್ಯಾಚಾರವೆಸಗಿರುವುದಾಗಿ ಆರೋಪಿಸಿ ನಿವೃತ್ತ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಐಎಎಸ್ ಅಧಿಕಾರಿ ವಿರುದ್ಧ ಸಂತ್ರೆಸೆ ದೂರು ನೀಡಿದ್ದಳು, ಇದೀಗ ಪ್ರತಿದೂರು ದಾಖಲಾಗಿದೆ.
ಬ್ಲ್ಯಾಕ್ ಮೇಲ್ ಮಾಡಿ ತಮ್ಮ ಮೇಲೆ ಆತ್ಯಾಚಾರವೆಸಗಿರುವುದಾಗಿ ಸುಳ್ಳು ಆರೋಪ ಹೊರಿಸಿ 70 ಲಕ್ಷ ಹಣ ವರ್ಗಾಯಿಸಿಕೊಂಡಿದ್ದಾರೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಪ್ರತಿದೂರು ನೀಡಿದ್ದಾರೆ. ಪ್ರತ್ಯೇಕ ಎರಡು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ತಮ್ಮ ಮೇಲೆ ಬಂದಿರುವ ಆರೋಪ ಸುಳ್ಳಾಗಿದೆ. ಪತ್ನಿಗೆ ಕೇರ್ ಟೇಕರ್ ಆಗಿ ಕೆಲಸಕ್ಕೆ ನಿಯೋಜನೆ ಮಾಡಿದ್ದು ನಿಜ. ಕೆಲಸಕ್ಕೆ ಸೇರಿಕೊಂಡ ಬಳಿಕ ಅರಂಭದ ದಿನಗಳಲ್ಲಿ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಳು. ಹೆಂಡತಿಯನ್ನು ಕೊನೆವರೆಗೂ ನೋಡಿಕೊಳ್ಳುವುದಾಗಿ ಹೇಳಿ ಮನೆಯ ಎಲ್ಲಾ ವಿಚಾರಗಳನ್ನ ತಿಳಿದುಕೊಂಡಿದ್ದಳು. ಬಳಿಕ ದೈಹಿಕ ಸಂಪರ್ಕ ಇಟ್ಟುಕೊಂಡು ಸಂಬಂಧ ಹೊಂದಿದ್ದೆವು. ಈ ಸಂದರ್ಭದಲ್ಲಿ ಹಂತ-ಹಂತವಾಗಿ 20 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದಳು.
ಅನಂತರ ಮತ್ತೆ ಹಣಕ್ಕೆ ಪೀಡಿಸಿದ್ದಳು. ವಾಟ್ಸಾಪ್ನಲ್ಲಿ ಗರ್ಭಿಣಿಯಾಗಿರುವ ನಕಲಿ ಲ್ಯಾಬ್ ರಿಪೋರ್ಟ್ ಕಳುಹಿಸಿ 10 ಕೋಟಿ ಹಣ ನೀಡದಿದ್ದರೆ ಮಾಧ್ಯಮಗಳಲ್ಲಿ ಮಾನಹಾನಿ ಮಾಡುವುದಾಗಿ ಬೆದರಿಸಿ ತನ್ನಿಂದ 70 ಲಕ್ಷ ಹಣ ಬಲವಂತವಾಗಿ ಪಡೆದುಕೊಂಡಿದ್ದಾಳೆ ಎಂದು ದೂರು ನೀಡಲಾಗಿದೆ.