ಬೆಂಗಳೂರು: ಗಂಧದ ತುಂಡುಗಳನ್ನ ಅಕ್ರಮವಾಗಿ ಸಾಗಾಟ ಮಾಡ್ತಿದ್ದ ಆರೋಪಿಯನ್ನು ಸುಬ್ರಹ್ಮಣ್ಯಪುರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕನಕಪುರ ರಸ್ತೆ ಕಡೆಯಿಂದ ಉತ್ತರಹಳ್ಳಿ ಕಡೆಗೆ ಸಾಗಾಟದ ಮಾಹಿತಿ ಬಂದಿತ್ತು.̤ ಪ್ರಕರಣ ದಾಖಲಿಸಿಕೊಂಡು ಸಂಬಂಧಪಟ್ಟ ತನಿಖೆ ನಡೆಸಿದ್ದ ಪೊಲೀಸರು, ಸ್ಥಳಕ್ಕೆ ತೆರಳಿ ಒಬ್ಬ ಆರೋಪಿಯನ್ನ ಬಂಧಿಸಿದ್ದಾರೆ.
ಆತನ ವಿಚಾರಣೆ ವೇಳೆ ಆತನ ಇಬ್ಬರು ಸಹಚರರ ಬಗೆಗಿನ ಮಾಹಿತಿ ಬೆಳಕಿಗೆ ಬಂದಿದ್ದು, ಕಾಡಿಗೆ ಸೌದೆ ತರುವಂತೆ ಹೋಗಿ ಗಂಧದ ಕಳ್ಳತನ ಮಾಡ್ತಿದ್ದ ಬಂಧಿತ ಆರೋಪಿಯು ಕೊಡಗು,ವಿರಾಜಪೇಟೆ,ಸಿದ್ದಾಪುರ ಭಾಗದ ಅರಣ್ಯ ಪ್ರದೇಶದಲ್ಲಿ ಕಳ್ಳತನ ಮಾಡುತ್ತಿದ್ದನು.
ಸಂಬಳದ ಜತೆಗೆ ಮಾಸಿಕವಾಗಿ 9,250 ರೂ. ಆದಾಯ ಬೇಕೆ..? ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಸಾಕು
ನಂತರ ಪಿರಿಯಾಪಟ್ಟಣದ ತನ್ನ ಮನೆಯಲ್ಲಿ ಬಚ್ಚಿಟ್ಟು, ನಂತರ ಗಿರಾಕಿಗಳನ್ನ ಹುಡುಕಿ ಮಾರಾಟ ಮಾಡುತ್ತಿದ್ದರು. ಆರೋಪಿಯಿಂದ 14,60,000 ಮೌಲ್ಯದ 146 ಕೆಜಿ ಶ್ರೀಗಂಧ ವಶಕ್ಕೆ ಪಡೆದಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರ ಹುಡುಕಾಟ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.