ಐಪಿಎಲ್ನಲ್ಲಿರುವ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಆಯ್ಕೆಯಾಗಿರುವ ಕೆ.ಸಿ ಕಾರಿಯಪ್ಪ ನನ್ನ ಮದುವೆ ಆಗುವುದಾಗಿ ಹೇಳಿ, ನನ್ನಿಂದ ಆಗಾಗ ಹಣವನ್ನು ಪಡೆದು ಮೋಸ ಮಾಡಿದ್ದಾನೆ ಎಂದು ಯುವತಿ ಎಂಬಾಕೆ ದೂರಿದ್ದಾರೆ.
ಹುಡುಗಿ ಆರೋಪಕ್ಕೆ ಪ್ರತಿದೂರು ದಾಖಲಿಸಿರುವ ಕೆಸಿ ಕಾರಿಯಪ್ಪ, ದಿವ್ಯಾ ಡ್ರಗ್ಸ್ ಅಡಿಕ್ಟ್ ಆಗಿದ್ದಾಳೆ. ಜತೆಗೆ ಅವಳ ಕ್ಯಾರೆಕ್ಟರ್ ಸರಿ ಇರಲಿಲ್ಲ. ಹೀಗಾಗಿ ನಾನು ಬ್ರೇಕ್ ಅಪ್ ಮಾಡಿಕೊಂಡಿದ್ದೆ ಎಂದು ಕ್ರಿಕೆಟರ್ ಕಾರ್ಯಪ್ಪ ದೂರಿದ್ದಾರೆ. ದಿವ್ಯಾ ಒಂದುವರೆ ವರ್ಷದ ಹಿಂದೆ ಸೋಶಿಯಲ್ ಮೀಡಿಯಾ ಮೂಲಕ ದಿಶಾ ಪರಿಚಯವಾಗಿದ್ದರು. ಒಂದೇ ಊರಿನವರು ಎಂಬ ಕಾರಣಕ್ಕೆ ಹತ್ತಿರವಾಗಿದ್ದೆವು. ನಂತರ ನಮ್ಮಿಬ್ಬರ ಸ್ನೇಹ ಪ್ರೀತಿಗೆ ತಿರುಗಿತ್ತು. ಆದರೆ ಕಾಲ ಕಳೆದಂತೆ ದಿವ್ಯಾಳಿಗೆ ಮೊದಲೊಂದು ಮದುವೆ ಆಗಿ ಡಿವೋರ್ಸ್ ಆಗಿರುವ ವಿಚಾರ ತಿಳಿದುಬಂತು. ಆಕೆ ಈ ವಿಚಾರವನ್ನು ಮುಚ್ಚಿಟ್ಟು ನನಗೆ ಮೋಸ ಮಾಡಿದ್ದಾಳೆ ಕಾರ್ಯಪ್ಪ ಆರೋಪಿಸಿದ್ದಾರೆ.
ದಿವ್ಯಾಳ ಕ್ಯಾರೆಕ್ಟರ್ ಸರಿ ಇಲ್ಲದ ಕಾರಣಕ್ಕೆ ಹಾಗೂ ಡ್ರಗ್ಸ್, ಮದ್ಯ ವ್ಯಸನಿಯಾಗಿರುವುದರಿಂದ ಹಲವಾರು ಸಾರಿ ಬುದ್ಧಿವಾದವನ್ನು ಹೇಳಿದ್ದೆ. ಕೇಳದೆ ಇದ್ದಾಗ ಬ್ರೇಕ್ ಅಪ್ ಮಾಡಿಕೊಂಡಿದ್ದೆ ಎಂದು ಕಾರ್ಯಪ್ಪ ತಿಳಿಸಿದ್ದಾರೆ. ಬ್ರೇಕ್ ಆಪ್ ಮಾಡಿಕೊಂಡ ಕಾರಣಕ್ಕೆ ಕೋಪಗೊಂಡ ದಿವ್ಯಾ ನನ್ನ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಕಳೆದ ವರ್ಷ ದೂರನ್ನೂ ನೀಡಿದ್ದಳು. ಆದರೆ ನಂತರ ಕೇಸಿನಲ್ಲಿ ನ್ಯಾಯಾಲಯಕ್ಕೆ ಬಿ ವರದಿಯನ್ನು ಸಲ್ಲಿಸಲಾಗಿತ್ತು ಎಂದಿದ್ದಾರೆ ಕಾರ್ಯಪ್ಪ.
ಇದಾದ ನಂತರವೂ ದಿವ್ಯಾ ಪದೇಪದೆ ನನಗೆ ಕಿರುಕುಳ ನೀಡುತ್ತಾ, ನಿನ್ನನ್ನು ಸುಮ್ಮನೆ ಬಿಡುವುದಿಲ್ಲ. ನಿನ್ನ ಕ್ರಿಕೆಟ್ ಕೆರಿಯರ್ ಅನ್ನು ಹಾಳು ಮಾಡುತ್ತೇನೆ ಎಂದು ಬ್ಲಾಕ್ಮೇಲ್ ಮಾಡುತ್ತಿದ್ದಳು ಎಂದು ಕಾರ್ಯಪ್ಪ ಆರೋಪಿಸಿದ್ದಾರೆ. ನಿನ್ನ ಹೆಸರು ಬರೆದಿಟ್ಟು ಸಾಯುತ್ತೇನೆ, ನಿನ್ನ ಬಗ್ಗೆ ಕೆಟ್ಟದಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಸಂದೇಶಗಳನ್ನು ಹಾಕುತ್ತೇನೆಂದು ಬೆದರಿಸುತ್ತ ಮಾನಸಿಕ ಹಿಂಸೆಯನ್ನು ನೀಡುತ್ತಿದ್ದಳು ವೃತ್ತಿ ಜೀವನ ಹಾಳಾಗುತ್ತದೆ ಎಂಬ ಕಾರಣಕ್ಕೆ ಆಕೆಯ ಕಿರುಕುಳವನ್ನು ಸಹಿಸಿಕೊಂಡು ಬಂದಿದ್ದೆ ಎಂದು ಕಾರ್ಯಪ್ಪ ಹೇಳಿಕೆ ನೀಡಿದ್ದಾರೆ.