ಬೆಂಗಳೂರು: ರೇಣುಕಾಸ್ವಾಮಿಗೆ ಕರೆಂಟ್ ಶಾಕ್ ಕೊಟ್ಟು ಹಿಂಸೆ ಕೊಟ್ಟ ಪ್ರಮುಖ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಮಾಸ್ಟರ್ಮೈಂಡ್ ರಾಜು ಅಲಿಯಾಸ್ ಧನರಾಜ್ನನ್ನು ಪೊಲೀಸರು ಬಂಧಿಸಿದ್ದಾರೆ. ಸ್ವಾಮಿ ಕೊಲೆ ಪ್ರಕರಣದಲ್ಲಿ ಈವರೆಗೆ 19 ಆರೋಪಿಗಳ ಬಂಧನ ಆಗಿದೆ. A5 ಆರೋಪಿ ನಂದೀಶ್ ಜೊತೆ ಬೆಂಗಳೂರಲ್ಲಿ ರಾಜು ಕೇಬಲ್ ಕೆಲಸ ಮಾಡುತ್ತಿದ್ದ. ಎಲೆಕ್ಟ್ರಿಕಲ್ ಮೆಗ್ಗರ್ ಬಗ್ಗೆ ನಂದೀಶ್, ರಾಜು ತಿಳಿದುಕೊಂಡಿದ್ದರು.
Eid Ul Adha 2024: ತ್ಯಾಗದ ಬಲಿದಾನದ ಪ್ರತೀಕ ಬಕ್ರೀದ್ ಹಬ್ಬದ ಮಹತ್ವ ಇಲ್ಲಿದೆ ನೋಡಿ..!
ಘಟನೆಯ ದಿನ ರಾಜುನ ನಂದೀಶ್ ಶೆಡ್ಗೆ ಕರೆಸಿಕೊಂಡಿದ್ದ. ಜೊತೆಗೆ ಎಲೆಕ್ಟ್ರಿಕಲ್ ಮೆಗ್ಗರ್ ಮಷಿನ್ ಕೂಡ ತರಿಸಿಕೊಳ್ಳಲಾಗಿದೆ. ಶೆಡ್ನಲ್ಲಿ ರೇಣುಕಾಸ್ವಾಮಿಗೆ ಕರೆಂಟ್ ಶಾಕ್ ನೀಡೋ ಪ್ಲ್ಯಾನ್ ಮಾಡಲಾಗಿದೆ. ಮೆಗ್ಗರ್ ಮಷಿನ್ ಬಳಸಿ ಸ್ವಾಮಿಗೆ ಕರೆಂಟ್ ಶಾಕ್ ನೀಡಲಾಗಿದೆ. ಪ್ರಕರಣ ಬಯಲಾಗುತ್ತಿದ್ದಂತೆ ರಾಜು ತಲೆಮರಿಸಿಕೊಂಡಿದ್ದ. ಈತ ಮಂಡ್ಯ ಮೂಲದವನಾಗಿದ್ದು, ಪ್ರಕರಣದಲ್ಲಿ 9ನೇ ಆರೋಪಿಯಾಗಿ ಮಾಡಲಾಗಿದೆ. ವಿಚಾರಣೆ ವೇಳೆ ರಾಜು ಸಂಪೂರ್ಣ ವಿಚಾರ ಬಾಯ್ಬಿಟ್ಟಿದ್ದಾರೆ.