ಬೆಂಗಳೂರು: ಓಲಾ ಕಾರ್ ಬುಕ್ ಮಾಡಿದ ವ್ಯಕ್ತಿಯ ಜೊತೆ ಸ್ನೇಹ ಬೆಳಸಿ ಅವನದ್ದೇ ಮನೆಯಲ್ಲಿ 18 ಲಕ್ಷ ರೂ. ಕದ್ದಿದ್ದ ಖದೀಮ ಚಾಲಕ ಸತೀಶ್ನನ್ನು ಚಂದ್ರಾಲೇಔಟ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಜನವರಿ 2ರಂದು ಊರಿಗೆ ತೆರಳುತ್ತಿದ್ದ ಪ್ರಕಾಶ್ ಕ್ಯಾಬ್ ಬುಕ್ ಮಾಡಿದ್ದ ವೇಳೆ ಸ್ನೇಹ ಬೆಳಸಿದ್ದ ಚಾಲಕ ಸತೀಶ್, ಪ್ರಕಾಶ್ ಮನೆಯಲ್ಲಿ ಯಾರೂ ಇಲ್ಲದ್ದನ್ನು ಖಚಿತ ಪಡಿಸಿಕೊಂಡಿದ್ದಾನೆ.
Diabetes: ಸಕ್ಕರೆ ಕಾಯಿಲೆ ಕಂಟ್ರೋಲ್’ಗೆ ಬರಬೇಕಾ..? ಹಾಗಾದ್ರೆ ಊಟಕ್ಕೂ ಮೊದಲು ಇದನ್ನು ತಿನ್ನಿ ಸಾಕು.!
ಪ್ರಕಾಶ್ ಊರಿಗೆ ಹೋಗುತ್ತಿದ್ದಂತೆ ಮನೆ ಬೀಗ ಮುರಿದು 18 ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣ ದೋಚಿದ್ದಾನೆ. ತನಿಖೆ ವೇಳೆ ಆಟೋ ಇಎಂಐ ಕಟ್ಟಲು ಮನೆ ಕಳ್ಳತನ ಮಾಡಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಘಟನೆ ಸಂಬಂಧ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.