ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಸಂಕಷ್ಟ ಹೆಚ್ಚಾಗ ತೊಡಗಿದ್ದು, ವಿಕಲಚೇತನರಿಗೆ ಅನುದಾನ ಕಡಿತ ಮಾಡಿದ ಆರೋಪಕ್ಕೆ ಒಳಗಾಗಿದೆ. ವಿಕಲಚೇತನರ ಅನುದಾನ ಕಡಿತ ಮಾಡಲಾಗಿದೆ ಎಂದು ಆರೋಪಿಸಿ ಬಿಜೆಪಿ ಆಕ್ರೋಶ ಹೊರಹಾಕಿದೆ. ಕಳೆದ ವರ್ಷಕ್ಕಿಂತ ವಿಕಲಚೇತರ ಅನುದಾನದಲ್ಲಿ 80% ರಷ್ಟು ಹಣ ಕಡಿತ ಮಾಡಲಾಗಿದೆ ಎಂದು ಬಿಜೆಪಿ ಆಪಾದಿಸಿದೆ. ಈ ವಿಚಾರವಾಗಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ ಎಕ್ಸ್ನಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಎಚ್ಚರ.. ಎಚ್ಚರ.. ಶನಿವಾರ ಈ ಕೆಲಸಗಳನ್ನು ಮಾಡಿದ್ರೆ ಶನಿ ದೋಷ ಬರೋದು ಗ್ಯಾರಂಟಿ!
ಕಳೆದ ವರ್ಷ ಸರ್ಕಾರ ವಿಕಲಚೇನರ ವಿವಿಧ ಯೋಜನೆಗಳಿಗೆ 53 ಕೋಟಿ ರೂ. ಅನುದಾನ ಮೀಸಲು ಇಡಲಾಗಿತ್ತು. ಆದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಬರೀ 10 ಕೋಟಿ ರೂ. ಅನುದಾನ ಮಾತ್ರ ಹಂಚಿಕೆ ಮಾಡಲಾಗಿದೆ. ಇದು ನಿಜಕ್ಕೂ ದುರದೃಷ್ಟಕರ. ಇದು ದಿವ್ಯಾಂಗರಿಗೆ ಆಗುತ್ತಿರುವ ಅನ್ಯಾಯ. ಇದರಿಂದ ಅವರ ಅಗತ್ಯ ಸೇವೆಗಳಿಗೆ ಧಕ್ಕೆ ಆಗಲಿದೆ. ಮೀಸಲಿಟ್ಟ ನಿಧಿಯನ್ನು ಅವರಿಗಾಗಿ, ಅವರ ಸೇವೆಗಾಗಿ ಉಪಯೋಗಿಸಬೇಕು ಎಂದು ಜೋಶಿ ಆಗ್ರಹಿಸಿದ್ದಾರೆ.