ತಾಲೂಕಿನ ರಾಂಪುರದ ಜೆಬಿಹಳ್ಳಿ ರಸ್ತೆಯಲ್ಲಿನ ಹನಿನೀರಾವರಿ ಸಲಕರಣೆ ಮಾರಾಟ ಮಳಿಗೆಗೆ ಮಂಗಳವಾರ ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿ 30 ಲಕ್ಷ ರೂಗೂ ಹೆಚ್ಚಿನ ಪ್ರಮಾಣದ ಹಾನಿಯಾಗಿದೆ.
ಭರತೇಶ್ ಕುಮಾರ್ ಎನ್ನುವವರಿಗೆ ಸೇರಿದ ಈ ಅಂಗಡಿಯಲ್ಲಿ ಡಿಪ್ ಪೈಪ್, ಪಿವಿಸಿ ಪೈಪ್, ಫಿಲ್ಟರ್, ಬಾಲ್ ವಾಲ್ ಸೇರಿದಂತೆ ರೈತರ ಜಮೀನುಗಳಿಗೆ ಹನಿ ನೀರಾವರಿ ಅಳವಡಿಕೆಗೆ ಅಗತ್ಯವಿರುವ ಎಲ್ಲಾ ಸಾಮಾಗ್ರಿಗಳು ಬೆಂಕಿ ಅವಘಡದಲ್ಲಿ ಸುಟ್ಟು ಭಸ್ಮವಾಗಿವೆ.
ಬೇವಿನ ನೀರಿನಿಂದ ಸ್ನಾನ ಮಾಡಿದರೆ ಆರೋಗ್ಯಕ್ಕೆ ಎಷ್ಟೊಂದು ಪ್ರಯೋಜಗಳಿದೆ ಗೊತ್ತಾ..?
ಸ್ಥಳಕ್ಕೆ ಮೊಳಕಾಲ್ಮುರು ಅಗ್ನಿ ಶಾಮಕ ದಳದ ಸಿಬ್ಬಂಧಿ ಆಗಮಿಸಿ ಬೆಂಕಿನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಸ್ಥಳದಲ್ಲಿ ಜಿಲ್ಲಾ ಅಗ್ನಿಶಾಮಕ ದಳ ಅಧಿಕಾರಿ ಸೋಮಶೇಖರ್ ಅಂಗಡಿ, ಸಹಾಯಕ ಅಗ್ನಿ ಶಾಮಕದಳದ ಅಧಿಕಾರಿ ರಮೇಶ್ ಕ್ಯೂಟ್, ಸಿಬ್ಬಂಧಿಗಳಾದ ಶಂಕರ ಮೂರ್ತಿ, ಬಸವರಾಜ್ ರಾಥೋಡ್, ಎನ್.ಪವನ್, ಎಂ.ಜೆ.ಧನುಷ್, ಆನಂದ್ ಪಾಟೀಲ್ ಇದ್ದರು.