ತುಮಕೂರು : ಕೊಂಡ ಹಾಯುವಾಗ ಅಪಘಡ ಸಂಭವಿಸಿದೆ. ತುಮಕೂರು ತಾಲೂಕಿನ ನೆರಳಾಪುರದ ಕೆಂಪಮ್ಮ ದೇವಸ್ಥಾನದಲ್ಲಿ ಘಟನೆ ನಡೆದಿದೆ.
ಕಳೆದ ಶನಿವಾರ ರಾತ್ರಿ ನೆರಳಾಪುರ ಗ್ರಾಮದ ಕೆಂಪಮ್ಮ ದೇವಿಯ ಕೊಂಡೊತ್ಸವ ನಡೆದಿತ್ತು. ಈ ವೇಳೆ ಪರಿಚಾರಕರು ಆಕಸ್ಮಿಕವಾಗಿ ದೇವರ ಉತ್ಸವ ಸಹಿತ ಕೊಂಡಕ್ಕೆ ಬಿದಿದ್ದಾರೆ. ದೇವಿಯ ಉತ್ಸವ ಹೊತ್ತಿದ್ದ ನವೀನ್ ಹಾಗೂ ದರ್ಶನ್ ಕೊಂಡಕ್ಕೆ ಬಿದ್ದಿದ್ದು, ಕೂಡಲೇ ಅಲ್ಲಿದ್ದವರು ಅವರನ್ನು ಹಿಡಿದಿದ್ದಾರೆ.
ಇನ್ನೂ ಉತ್ಸವ ಹೊತ್ತ ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿವೆ.