ವಿಜಯಪುರ:– ವಿಜಯಪುರ ನಗರದ ಬೇಗಂ ತಲಾಬ್ನಲ್ಲಿ ಈಜಲು ಹೋಗಿ ವಿದ್ಯಾರ್ಥಿಯೋರ್ವ ನೀರು ಪಾಲಾಗಿ ಸಾವನ್ನಪ್ಪಿರುವ ಘಟನೆ ಜರುಗಿದೆ.
ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಹೊಸವರ್ಷದಿಂದ ರೈಲು ಅವಧಿ ವಿಸ್ತರಣೆ!
20 ವರ್ಷದ ಅನಿರುದ್ದ ಕಲ್ಯಾಣಕುಮಾರ ಸಾಮ್ರಾಣಿ ಮೃತ ದುರ್ದೈವಿ. ಇಂದು ರಜೆಯ ಹಿನ್ನೆಲೆ ಅನಿರುದ್ದ ತನ್ನ ಸಹೋದರ ಹಾಗೂ ಗೆಳೆಯರೊಂದಿಗೆ ಬೇಗಂ ತಲಾಬ್ಗೆ ತೆರಳಿದ್ದರು. ಈ ವೇಳೆ ಅನಿರುದ್ದ ಈಜಲು ಕೆರೆಗೆ ಇಳಿದಿದ್ದ. ಸಹೋದರ ಹಾಗೂ ಗೆಳೆಯರು ಎಷ್ಟೇ ಬೇಡ ಹೇಳಿದರೂ ಕೇಳದೇ ನೀರಿಗೆ ಇಳಿದಿದ್ದಾನೆ. ಬಳಿಕ ನೀರು ಪಾಲಾಗಿದ್ದಾನೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಮೃತನ ಶವಕ್ಕಾಗಿ ಶೋಧ ಕಾರ್ಯ ಆರಂಭಿಸಲಾಗಿದೆ. ಬೋಟ್ ಮೂಲಕ ನೀರಿನಲ್ಲಿ ಹುಡುಕಾಟ ನಡೆಸಿದ್ದು, ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.