ತುಮಕೂರು:- ತಾಲೂಕಿನ ಕೌತಮಾರನಹಳ್ಳಿ ಗ್ರಾಮದ ಬಳಿ ಜಲ್ಲಿ ಕ್ರಷರ್ನಲ್ಲಿ ಕೆಲಸ ಮಾಡುವಾಗ ಕಲ್ಲುಗಳು ಬಿದ್ದು ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವಂತಹ ಘಟನೆ ಜರುಗಿದೆ.
29 ವರ್ಷದ ಮೊಹಮ್ಮದ್ ಅಬ್ದುಲ್, 25 ವರ್ಷದ ಮನು ಮೃತ ಕಾರ್ಮಿಕರು ಎನ್ನಲಾಗಿದೆ. ಕ್ವಾರಿಯಲ್ಲಿ ಕಲ್ಲು ಕೊರೆಯುವಾಗ ಮೇಲಿಂದ ಕಲ್ಲುಗಳು ಬಿದ್ದು ದುರಂತ ಸಂಭವಿಸಿದೆ.
ಮೃತ ಮೊಹಮ್ಮದ್, ಮನು ಇಬ್ಬರೂ ಬಿಹಾರ ಮೂಲದವರು. ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.