ಆನೇಕಲ್:- ಸಂಪ್ ಕ್ಲೀನಿಂಗ್ ಮಾಡುವ ವೇಳೆ ಇಬ್ಬರು ಕಾರ್ಮಿಕರು ದಾರುಣ ಸಾವನ್ನಪ್ಪಿದ ಘಟನೆ ಜರುಗಿದೆ.
ನೆನ್ನೆ ಸಂಜೆ ವಾಟರ್ ಟ್ಯಾಂಕ್ ಕ್ಲೀನ್ ಮಾಡಲು ಮುಂದಾಗಿದ್ದ ವೇಳೆ ಅವಘಡ ಸಂಭವಿಸಿದೆ. ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ತಿರುಪಾಳ್ಯದ ಸನ್ ಶೈನ್ ಹೋಲ್ಡಿಂಗ್ ಕಂಪನಿಯಲ್ಲಿ ದುರ್ಘಟನೆ ಸಂಭವಿಸಿದೆ.
ಶ್ರೀನಿವಾಸ್ ರೆಡ್ಡಿ ಎಂಬುವವರಿಗೆ ಸೇರಿದ ಕಂಪನಿ ಇದಾಗಿದ್ದು, ಆಸಿಡ್ ಹಾಕಿ ವಾಟರ್ ಟ್ಯಾಂಕ್ ಕ್ಲೀನ್ ಮಾಡಲು ಮುಂದಾಗಿದ್ದರು. ಈ ವೇಳೆ ಉಸಿರುಗಟ್ಟಿ ಇಬ್ಬರು ಕಾರ್ಮಿಕರ ದಾರುಣ ಸಾವನ್ನಪ್ಪಿದ್ದಾರೆ.
ಬಿಹಾರ ಮೂಲದ ಕಾರ್ಮಿಕರಾದ ಚಂದನ್ ರಜ್ ಬನ್ ಸಿಂಗ್(31), ಪಿಂಟು ರಜ್ ಬನ್ ಸಿಂಗ್(22) ಮೃತರು. ಮೃತರಿಬ್ಬರು ಸಹೋದರರು, ಒಟ್ಟಿಗೆ ಕೆಲಸ ಮಾಡುತ್ತಿದ್ರು. ಕಾರ್ಮಿಕರನ್ನ ಉಳಿಸಲು ಜಗದೀಶ್ ಹಾಗೂ ಮಾಲೀಕ ಶ್ರೀನಿವಾಸ್ ರೆಡ್ಡಿ ಹರಸಾಹಸ ಪಟ್ಟಿದ್ದಾರೆ.
ಅಸ್ವಸ್ತರನ್ನ ಕೂಡಲೇ ಅಲ್ಲಿನ ಕಾರ್ಮಿಕರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತ ದೇಹಗಳನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.