ಬೆಂಗಳೂರು:- ಬಿಎಂಟಿಸಿ ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿದ ಘಟನೆ ಬನಶಂಕರಿ ಬಸ್ ಸ್ಟಾಪ್ ಬಳಿ ಜರುಗಿದೆ.
ಬಿಎಂಟಿಸಿ ಚಾಲಕ ಸಿಗ್ನಲ್ ಜಂಪ್ ಮಾಡಿರುವ ಆರೋಪ ಕೇಳಿ ಬಂದಿದೆ. ನಿನ್ನೆ ಮಧ್ಯಾಹ್ನ 12 ಗಂಟೆ 7 ನಿಮಿಷಕ್ಕೆ ಘಟನೆ ಜರುಗಿದೆ.
ಬಸ್ ಢಿಕ್ಕಿಯಾಗ್ತಿದ್ದಂಗೆ ರಸ್ತೆಗೆ ಎಸೆಯಲ್ಪಟ್ಟಿದ್ದಾನೆ ಸವಾರ. ಚಾಲಕನ ವಿರುದ್ಧ ನಗರದ ಸಂಚಾರಿ ಪೊಲೀಸರಿಗೆ ದೂರು ನೀಡಿದ್ದಾರೆ. X ಮೂಲಕ ಸಂಚಾರಿ ಪೊಲೀಸರು, ಬಿಬಿಎಂಪಿ ಕಮಿಷನರ್ ಗೆ ದೂರು ನೀಡಿದ್ದಾರೆ.