ಗದಗ:- ಅಂಬುಲೆನ್ಸ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರರಿಗೆ ಗಂಭೀರ ಗಾಯವಾಗಿರುವ ಘಟನೆ ಗದಗ ನಗರದ ಬೆಟಗೇರಿ ರೈಲ್ವೇ ಅಂಡರ್ ಬ್ರಿಡ್ಜ್ ಬಳಿ ಜರುಗಿದೆ.
ನಿಮ್ಮ ಮನೆಯಲ್ಲಿ ದರಿದ್ರ ಹೆಚ್ಚಾಗಲು ಇದೇ ಕಾರಣ! ಸಿರಿವಂತರಾಗಲು ಹೀಗೆ ಮಾಡಿ?
ಅಪಘಾತತ ತೀವ್ರತೆಗೆ ಅಂಬುಲೆನ್ಸ ಗಾಜು ಪುಡಿ ಪುಡಿ ಆಗಿದೆ. ಬೈಕ್ ಸವಾರ ನಾರಾಯಣ (25) ಹೆಂಡತಿ ನಫಿಸಾ(24) ಮಕ್ಕಳು ದಿವ್ಯಾ (3 )ಸೋನು (2) ಸ್ಥಿತಿ ಗಂಭೀರವಾಗಿದೆ. ಅಂಬುಲೆನ್ಸ ಚಾಲಕನ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.
ಅಂಬುಲೆನ್ಸ್ ಚಾಲಕ ಕುಡಿದು ವಾಹನ ಚಲಾಯಿಸುತ್ತಿದ್ದ ಎಂದು ಆರೋಪ ಮಾಡಲಾಗುತ್ತಿದೆ. ರಾಂಗ್ ಸೈಡ್ ನಿಂದ ಬಂದು ಬೈಕ ಸವಾರಿನಿಗೆ ಆ್ಯಂಬುಲೆನ್ಸ್ ಡಿಕ್ಕಿ ಹೊಡೆದಿದೆ. ಸ್ಥಳಿಯರಿಂದ ಗಾಯಾಳುಗಳನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಸ್ಥಳಕ್ಕೆ ಟ್ರಾಫಿಕ್ ಪೊಲೀಸರ ಭೇಟಿ, ಪರಿಶೀಲನೆ ಮಾಡಲಾಗಿದೆ. ಗದಗ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.