ದಾವಣಗೆರೆ:- ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಅವಘಡ ಸಂಭವಿಸಿದ್ದು, ಮೇಲ್ಚಾವಣಿ ಪದರು ಕುಸಿದು ಮಗು ಸೇರಿ ಮೂವರು ಗಾಯಗೊಂಡಿದ್ದಾರೆ.
ಹುಬ್ಬಳ್ಳಿ-ಧಾರವಾಡದಲ್ಲಿ ಲೈಟ್ ಟ್ರಾಮ್ ಸಾರಿಗೆ ಯೋಜನೆ ತರುವತ್ತ ಸಚಿವ ಸಂತೋಷ್ ಲಾಡ್ ಚಿತ್ತ!
ಪ್ರೇಮಕ್ಕ (46) ಕಾವೇರಿ(36) ಹಾಗೂ ನೇತ್ರಾ (02) ಮಗುವಿಗೆ ಗಾಯವಾಗಿದೆ. ಮಗುವಿನ ತಲೆಗೆ ಹಾಗೂ ಇಬ್ಬರು ಮಹಿಳೆಯರ ಕೈ ಮತ್ತು ಇನ್ನೊಬ್ಬರ ಬೆನ್ನಿಗೆ ಗಾಯವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಗಾಯಾಳುಗಳು ವಿಜಯನಗರ ಜಿಲ್ಲೆಯ ಹಲವಾಗಲು ಹಾಗೂ ಹಳಲು ಗ್ರಾಮದ ನಿವಾಸಿಗಳಾಗಿದ್ದು, ಪ್ರೇಮಕ್ಕ ಹಾಗೂ ಕಾವೇರಿ ಸಹೋದರಿಯರು. ತಾಯಿ ಆಸ್ಪತ್ರೆಗೆ ದಾಖಲಾದ ಹಿನ್ನೆಲೆ ಆರೋಗ್ಯ ವಿಚಾರಿಸಲು ಬಂದಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಇನ್ನು ಘಟನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತೊಡಿಸಿದ್ದು, ಗಾಯಾಳುಗಳಿಗೆ ಪರಿಹಾರ ನೀಡುವುದರ ಬದಲಿಗೆ ಬೇಗ ಕಟ್ಟಡ ದುರಸ್ತಿ ಮಾಡಿ ಎಂದು ಆಗ್ರಹಿಸಿದ್ದಾರೆ.