ಬೆಂಗಳೂರು: ಸೈದ್ಧಾಂತಿಕವಾಗಿ ಮಲ್ಲಿಕಾರ್ಜುನ ಖರ್ಗೆಯವರನ್ನು ಎದುರಿಸುವ ಶಕ್ತಿ ಇಲ್ಲದಿದ್ದರೆ ನಿಮ್ಮ ಸೋಲನ್ನು ಒಪ್ಪಿಕೊಳ್ಳಿ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು (Ramesh Babu) ಅವರು ಬಿಜೆಪಿಗರಿಗೆ ಸವಾಲು ಹಾಕಿದ್ದಾರೆ.
ಖರ್ಗೆಯವರ ಬಗ್ಗೆ ಅವರ ಕಾರ್ಯಗಳ ಬಗ್ಗೆ ಸೈದ್ಧಾಂತಿಕವಾಗಿ ಆರೋಗ್ಯಕರವಾಗಿ ಟೀಕೆ ಮಾಡಿದರೆ ನಾವು ಸ್ವೀಕಾರ ಮಾಡುತ್ತೇವೆ. ಹಿಂದೆ ಎಸ್ಎಂ ಕೃಷ್ಣರವರು ಕಾಂಗ್ರೆಸ್ನಲ್ಲಿದ್ದಾಗ ಸದಾನಂದ ಗೌಡರ (Sadananda Gowda) ನಗುವಿನ ಬಗ್ಗೆ ಟೀಕೆಯ ಮಾತನಾಡಿ ಮತ್ತೆ ಅವರಲ್ಲಿ ಕ್ಷಮೆಯಾಚಿಸಿದ್ದರು. ದೇವೇಗೌಡರು ಯಡಿಯೂರಪ್ಪನವರ ಬಗ್ಗೆ ಕೀಳು ಭಾಷೆಯಲ್ಲಿ ಮಾತನಾಡಿ ಅವರೂ ವಿಷಾದ ವ್ಯಕ್ತಪಡಿಸಿದ್ದರು. ಅಜ್ಞಾನಿ ಚಕ್ರವರ್ತಿ ಸೂಲಿಬೆಲೆಯಾಗಲಿ, ಅಡ್ನಾಡಿಯಾದಂತಹ ಅನಂತ್ ಕುಮಾರ್ ಹೆಗಡೆಯಾಗಲಿ ದೊಡ್ಡ ನಾಯಕರಿಗೆ ಕೆಳಮಟ್ಟದ ಭಾಷೆಯಲ್ಲಿ ಮಾತನಾಡಿ ನಾಯಕರಾಗುವ ಆಸೆ ಬಿಡಬೇಕು. ನೀವು ಹೀಗೆ ಟೀಕೆ ಮಾಡಿದರೆ ನಾವು ನಿಮ್ಮನ್ನು ಕೆಳ ಮಟ್ಟದ ಭಾಷೆಯಲ್ಲಿ ಟೀಕೆ ಮಾಡುವ ಅನಿವಾರ್ಯತೆಯೂ ಇಲ್ಲ ಅವಶ್ಯಕತೆಯೂ ಇಲ್ಲ ಎಂದರು.