ಬಾಗಲಕೋಟೆ: ನಿಮ್ಮನ್ನು ಯಾವ ವಿಷಯ ನಿರಂತರ ಕಾಡುತ್ತಿರುತ್ತದೆಯೋ ಆ ವಿಷಯದ ಮೇಲೆ ನಿರಂತರ ಓದು ಅಧ್ಯಯನದಿಂದ ಮಾತ್ರ ವಿಷಯದ ತಲಸ್ಪರ್ಶಿ ಜ್ಞಾನ ಪಡೆಯಲು ಸಂಶೋಧನೆಯು ಸಂಶೋಧಕ ಜಾಣ್ಮೆ,ತಾಳ್ಮೆ ಹಾಗೂ ಚಿಕಿತ್ಸಕ ಭಾವದಿಂದ ಸಾಧ್ಯ ಎಂದು ಅಭಿಪ್ರಾಯಪಟ್ಟರು
ಡ್ಯೂಟಿಯಿಂದ ತಪ್ಪಿಸಿಕೊಳ್ಳಲು ಕಾನ್ಸ್ಟೇಬಲ್ ಹೈಡ್ರಾಮ: ಆಮೇಲೇನಾಯ್ತು ಗೊತ್ತಾ?
ನೀಲಗಾರ ಸಮಾಜದವರು ಏರ್ಪಡಿಸಿದ ಪ್ರತಿಭಾಪುರಸ್ಕಾರ ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಕೃಷ್ಣಾತೀರ ಕನ್ನಡ ಕಥನ ಸಾಹಿತ್ಯದಲ್ಲಿ ಸಾಂಸ್ಕೃತಿಕ ವಿನ್ಯಾಸಗಳು ಎಂಬ ಪ್ರಬಂಧ ಮಂಡಿಸಿ ಡಾಕ್ಟರೇಟ್ (ಪಿಎಚ್.ಡಿ) ಪದವಿ ಪಡೆದುದಕ್ಕಾಗಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಶಿಕ್ಷಣ ಆಮ್ಲಜನಕ ಇದ್ದಹಾಗೆ ವ್ಯಕ್ತಿಯ ವಯಕ್ತಿಕ ಬೆಳವಣಿಗೆಯೊಂದಿಗೆ ಸಮುದಾಯದ ಬೆಳವಣಿಗೆಯಾಗುವುದು
ಸ್ಪರ್ಧಾತ್ಮಕ ದಿನಮಾನಗಳಲ್ಲಿ ಸಾಂಪ್ರದಾಯಿಕ ಓದಿನೊಂದಿಗೆ ಸಂಶೋಧನಾತ್ಮಕ ಮನೋಭಾವ ಬೆಳಸಿಕೊಳ್ಳಿ ,ಶೈಕ್ಷಣಿಕ ಗುಣಮಟ್ಟದ ಹೆಚ್ಚಳಕ್ಕೆ ಗ್ರಾಮೀಣ ವಿದ್ಯಾರ್ಥಿಗಳು ತೊಡಗಿಕೊಳ್ಳಬೇಕು.ಎಂದು ಮುಂಖಂಡರಾದ ಅಶೋಕ ಹೊಸೂರ
ಹೇಳಿದರು.
ಶಿಕ್ಷಣ ರಂಗದಲ್ಲಿ ಗ್ರಾಮೀಣ ಮಕ್ಕಳಿಗಿಂತ ಪಟ್ಟಣದ ವಿದ್ಯಾರ್ಥಿಗಳು ಯಾವೂದಕ್ಕೂ ಕಡಿಮೆ ಇಲ್ಲ ಎನ್ನುವಂತ ಮನೋಭಾವ ಬೆಳೆಯಬೇಕಾದರೆ ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳು ಹೆಚ್ಚು ಶ್ರಮವಹಿಸಿ ಓದು ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು ಎಂದು ಹೇಳುತ್ತಾ ಎದಗೆ ಬಿದ್ದ ಅಕ್ಷರ ಭೂಮಿಗೆ ಬಿದ್ದ ಬೀಜ ಇಂದಲ್ಲ ನಾಳೆ ಫಲ ಕೊಟ್ಟೆ ಕೊಡುವುದು.ಎಂಬ ಹಿರಿಯ ಕವಿಯ ಮಾತುಗಳನ್ನು ಅಶೋಕ ನೀಲವಾಣಿ ನೆನಪಿಸಿ ಪ್ರೊತ್ಸಾಹದ ಮಾತುಗಳನ್ನಾಡಿದರು.
ಸಮಾರಂಭದಲ್ಲಿ ಚಿದಾನಂದ ಕಟಗೇರಿ,ಸುರೇಶ ನೀಲವಾಣಿ,ಅನೀಲ ಹಾವನಾಳ, ಬಸವರಾಜ ಹಣಗಂಡಿ,ರವಿ ಹೊಸೂರ , ಮಹಾನಿಂಗ ಸಿದ್ದಾಪೂರ,ರಮೇಶ ಔರಸಂಗ,ಶಂಭು ಮಮದಾಪೂರ,ರಾಜು ಕಮತಗಿ ರಮೇಶ ಮುಂಡಗನೂರ, ಗುರು ಮಮದಾಪೂರ ,ಮಂಜು ನೀಲವಾಣಿ,ಮುಖಂಡರು ಉಪಸ್ಥಿತರಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ