ಶಿವಮೊಗ್ಗ: ಭದ್ರಾವತಿಯಲ್ಲಿ ಮಹಿಳಾ ಅಧಿಕಾರಿಗೆ ನಿಂದನೆ ಪ್ರಕರಣ ಸಂಬಂಧ ಇದೀಗ ಅಧಿಕಾರಿ ಪರವಾಗಿ ಪ್ರಣವಾನಂದ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ. ಇಂದು ಅಧಿಕಾರಿಯನ್ನು ಭೇಟಿ ಮಾಡಿ ಮಾತನಾಡಿದ ಅವರು, ಈಡಿಗೆ ಸಮುದಾಯಕ್ಕೆ ಸೇರಿದ ಜ್ಯೋತಿಯವರು ನಿಷ್ಠಾವಂತ ಅಧಿಕಾರಿ. ವ್ಯಕ್ತಿಯೊಬ್ಬ ಅಚಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಮರಳಿನ ಗಾಡಿ ಕೂಡ ಹತ್ತಿಸುವ ಪ್ರಯತ್ನ ಮಾಡಿದ್ದಾರೆ. ಸಮಾಜದ ಗುರುವಾಗಿ ಅವರಿಗೆ ನೈತಿಕ ಬೆಂಬಲ ಕೊಡಲು ಇಲ್ಲಿಗೆ ಬಂದಿದ್ದೇನೆ. ಅವರಿಗೆ ಧೈರ್ಯ ತುಂಬಲು ಬಂದಿದ್ದೇನೆ. ಹಿಂದುಳಿದ ವರ್ಗದ ಮಹಿಳೆ ಅಪಮಾನ ಆಗಿದೆ. ಸಂಗಮೇಶ್ ಮಗನನ್ನ ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.
ಸಿ.ಟಿ.ರವಿ ಎಷ್ಟು ಬೇಗಾ ಬಂಧಿಸಿದ್ರಿ, ಯಾರು ಕಾಲ್ ಮಾಡಿದ್ದಾರೆ ಎಲ್ಲವೂ ಗೊತ್ತಿದೆ. ಈಡಿಗ ಸಮುದಾಯದ ಮೂಲೆ ಗುಂಪು ಮಾಡಿದ್ದಾರೆ . ಈಡಿಗ ಸಮುದಾಯ ಮುಳುಗಿಸುವ ಕೆಲಸ ಸರ್ಕಾರಕ್ಕೆ ಮಾಡುತ್ತಿದೆ. ನೈತಿಕ ಹೊಣೆ ಹೊತ್ತು ಸಂಗಮೇಶ್ ಎಂಎಲ್ಎ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಸಂಗಮೇಶ್ ನನ್ನು ನಿಗಮ ಮಂಡಳಿ ಸ್ಥಾನದಿಂದ ಕಿತ್ತು ಹಾಕಬೇಕು. ಸಿಎಂ ನಮ್ಮಸಮಾಜಕ್ಕೆ ಗೌರವ ಕೊಡುವುದಾದರೇ ಕೂಡಲೇ ಈ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಸೂಕ್ತ ಕ್ರಮ ತೆಗೆದುಕೊಂಡಿಲ್ಲ ಅಂದ್ರೆ ಸಮಾಜ ಮುಖಂಡರು ಸಭೆ ಸೇರಿ ಮುಂದಿನ ಹೋರಾಟ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದರು.