ಬೆಳಗಾವಿ/ ಬೆಂಗಳೂರು:- ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್ ವಿರುದ್ಧ ಸಿಟಿ ರವಿ ಅವರು ಅವ್ಯಾಚ್ಯ ಪದ ಬಳಕೆಗೆ ಸಂಬಂಧಪಟ್ಟಂತೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಉತ್ತಮ ಸ್ಥಾನದಲ್ಲಿದ್ದುಕೊಂಡು ಈ ರೀತಿಯ ಮಾತನಾಡುತ್ತಿದ್ದಾರೆ ಅಲ್ವಾ ಇದೇನಾ ಅವರ ಸಂಸ್ಕೃತಿ ಎಂದು ಕಿಡಿಕಾರಿದ್ದಾರೆ.
ಧಾರವಾಡ: ಸಿ.ಟಿ.ರವಿ ಬಂಧನ ಖಂಡಿಸಿ ಪ್ರತಿಭಟನೆ, ಸಚಿವೆ ಹೆಬ್ಬಾಳ್ಕರ್ ವಿರುದ್ಧ ಆಕ್ರೋಶ!
ಈ ಬಗ್ಗೆ ಮಾತನಾಡಿದ ಅವರು, ಯಾವಾಗಲು ಧರ್ಮ, ಸಂಸ್ಕೃತಿ ಬಗ್ಗೆ ಮಾತನಾಡುವ ಅವರು ಭಾರತ ಮಾತೆಗೆ, ಮಾತೃಭೂಮಿಗೆ ಅಪಮಾನ ಮಾಡಿದ್ದಾರೆ, ಇದೇನಾ ಬಿಜೆಪಿಯ ಸಂಸ್ಕೃತಿ ಎಂದು ಪ್ರಶ್ನಿಸಿದ್ದಾರೆ.
ಲೋಕ ಸಭೆಯ ಅಧಿವೇಶನದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆಗೆ ಸಂಬಂಧಪಟ್ಟಂತೆ ಪ್ರತಿಭಟನೆ ನಡೆಸುವಾಗ ಓರ್ವ ಗೌರವಾನ್ವಿತ ಸ್ಥಾನದಲ್ಲಿರುವ ಮಹಿಳೆಗೆ ಸಾರ್ವಜನಿಕ ಸ್ಥಳದಲ್ಲಿ ಸುಮಾರು 12 ಬಾರಿ ಅವ್ಯಾಚ್ಯ ಪದವನ್ನು ಬಳಕೆ ಮಾಡಿದ್ದಾರೆ.
ಇದು ನಿಜಕ್ಕೂ ಅವರ ನಡತೆಯನ್ನು ತೋರಿಸುತ್ತದೆ, ಈ ಹಿಂದೆ ಶಾಸಕ ಮುನಿರತ್ನ ವಿಚಾರದಲ್ಲಿಯೂ ಬಿಜೆಪಿ ಹೀಗೆ ವರ್ತನೆ ಮಾಡಿತ್ತು. ಇದೀಗ ಈ ವಿಚಾರದಲ್ಲೂ ಇದೇ ರೀತಿ ವರ್ತಿಸುತ್ತಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು.