ಬೆಂಗಳೂರು: ಪಂಡಿತ್ ಪುಟ್ಟರಾಜ ಕವಿ ಗವಾಯಿಗಳ ಮಠದ ಶ್ರೀಗಳ ಭವಿಷ್ಯವಾಣಿ ನಿಜವಾಗಿದೆ. ಗದಗ ಗವಾಯಿಗಳ ಮಠದ ಪೀಠಾಧಿಪತಿ ಕಲ್ಲಯ್ಯನವರು ನವೆಂಬರ್ 8 ರಂದು ಬಿ.ವೈ. ವಿಜಯೇಂದ್ರ ಅವರಿಗೆ ಕರೆ ಮಾಡಿ ಹುಟ್ಟಹಬ್ಬಕ್ಕೆ ಶುಭ ಕೋರಿದ್ದರು. ಈ ವೇಳೆ ನೀವು ಅಧ್ಯಕ್ಷರಾಗ್ತಿರಿ ಎಂದು ಹಾರೈಕೆ ಮಾಡಿದ್ದರು. ಅದರಂತೆ ಎರಡೇ ದಿನದಲ್ಲಿ ಶ್ರೀಗಳ ಭವಿಷ್ಯವಾಣಿ ನಿಜವಾಗಿದೆ. ನಿನ್ನೆ ಬಿಜೆಪಿ ಹೈಕಮಾಂಡ್ ವಿಜಯೇಂದ್ರ ಅವ್ರನ್ನು ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಶ್ರೀಗಳ ಭವಿಷ್ಯವಾಣಿ ಫುಲ್ ವೈರಲ್ ಆಗಿದೆ.
ರಾಜ್ಯದಲ್ಲಿ 25ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕೆಂದು ಗುರಿ ಇಟ್ಟಿದ್ದೇವೆ: ಬಿ.ಎಸ್.ಯಡಿಯೂರಪ್ಪ
ಎಲ್ಲರೂ ಒಗ್ಗೂಡಿ ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸುತ್ತೇವೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದರು. ರಾಷ್ಟ್ರೀಯ ನಾಯಕರು ಕೂಡ ಬೂತ್ ಮಟ್ಟದಲ್ಲಿ ಕೆಲಸ ಮಾಡಿದ್ದಾರೆ. ಬೂತ್ ಮಟ್ಟದಲ್ಲಿ ಕೆಲಸ ಮಾಡಿ ಇಂದು ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ. ಬೂತ್ ಗೆದ್ದರೇ ರಾಷ್ಟ್ರ ಗೆಲ್ತೇವೆ ಎಂದು ನಡ್ಡಾ ಅವರ ಕಲ್ಪನೆ ಇದೆ. ಹೀಗಾಗಿ ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸುತ್ತೇವೆ ಎಂದರು.