ಬೆಂಗಳೂರು: ಇತ್ತೀಚಿಗೆ ಬೆಂಗಳೂರಿನಲ್ಲಿ ಉತ್ತರ ಪ್ರದೇಶ ಮೂಲದ ಟೆಕ್ಕಿ ಅತುಲ್ ಸುಭಾಷ್ ಹೆಂಡತಿಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಇಡೀ ದೇಶದಲ್ಲಿ ಸದ್ದು ಮಾಡಿತ್ತು. ಇದೀಗ ಅಂತಹದ್ದೇ ಮತ್ತೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೌದು ಒಡಿಶಾದ ಜನಪ್ರಿಯ ರ್ಯಾಪರ್ ಅಭಿನವ್ ಸಿಂಗ್ ಬೆಂಗಳೂರಿನ ಮಾರತ್ ಹಳ್ಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿತ್ತು. ಈ ಸಂಬಂಧ ಮಾರತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದರ ಬೆನ್ನಲ್ಲೇ ಮಾರತ್ ಹಳ್ಳಿ ಪೊಲೀಸರ ತನಿಖೆ ವೇಳೆ ಹಲವು ವಿಚಾರಗಳು ಬಯಲಿಗೆ ಬಂದಿದೆ.
ಇತ್ತೀಚಿಗೆ ಬೆಂಗಳೂರಿನಲ್ಲಿ ಉತ್ತರ ಪ್ರದೇಶ ಮೂಲದ ಟೆಕ್ಕಿ ಅತುಲ್ ಸುಭಾಷ್ ಹೆಂಡತಿಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದರು. ಡತ್ನೋಟ್ನಲ್ಲಿ ಹೆಂಡ್ತಿ ಕಿರುಳವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಉತ್ತರ ಪ್ರದೇಶಕ್ಕೆ ತೆರಳಿ ಅತುಲ್ ಹೆಂಡ್ತಿ ಸೇರಿದಂತೆ ಆಕೆಯ ಸಂಬಂಧಿಕರನ್ನು ಬಂಧಿಸಿದ್ದರು.
ಇದೀಗ ರ್ಯಾಪರ್ ಅಭಿನವ್ ಸಿಂಗ್ ಆತ್ಮಹತ್ಯೆಗೆ ಶರಣಾಗಿರುವುದು ಗೊತ್ತಾಗಿದೆ. ಟೆಕ್ಕಿಯಾಗಿದ್ದ ಅಭಿನವ್ ಮದುವೆಯಾದಗಿನಿಂದ ಜೀವನದಲ್ಲಿ ಯಾವುದು ಸರಿ ಇರಲಿಲ್ಲವಂತೆ. ಪತಿ ಪತ್ನಿ ನಡುವೆ ಗಲಾಟೆ ಮಾಡಿಕೊಂಡು ಬೇರೆ ಬೇರೆ ಆಗಿದ್ರು.
ಈ ನಡುವೆ ಅಭಿನವ್ ವಿರುದ್ಧ ಆತನ ಪತ್ನಿ ನನ್ನ ಮೇಲೆ ಹಲ್ಲೆಯಾಗಿದೆ. ಮಾನಸಿಕ ಕಿರುಕುಳ ನೀಡಿದ್ದಾನೆ ಅಂತಾ ಒಡಿಸ್ಸಾ ದಲ್ಲಿ ಎರಡು ಕೇಸ್ ದಾಖಲು ಮಾಡಿದ್ಲು. ಬೆಂಗಳೂರಿನಿಂದ ಒಡಿಸ್ಸಾಗೆ ತೆರಳಿ ಅಭಿನವ್ ಕೇಸ್ ಸಂಬಂಧ ಹಲವು ಬಾರಿ ವಿಚಾರಣೆಗೆ ಹಾಜರಾಗಿ ಬಂದಿದ್ದ.
ಇದು ಅಭಿನವ್ ಮಾನಸಿಕ ನೆಮ್ಮದಿಯನ್ನು ಹಾಳು ಮಾಡಿತ್ತು. ಅಂತೆಯೇ ಅಭಿನವ್ ಆತ್ಮಹತ್ಯೆಗೆ ಎರಡು ದಿನ ಮುಂಚೆ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ಅಭಿನವ್ ಪತ್ನಿ ಮತ್ತೆ ದೂರು ನೀಡಿದ್ಲು. ಇದು ಅಭಿನವ್ ಗೆ ಸಾಕಷ್ಟು ನೋವು ತಂದಿತ್ತು. ಈ ಜಂಜಾಟವೇ ಬೇಡ. ಇದಕ್ಕೆಲ್ಲ ಆತ್ಮಹತ್ಯೆ ಒಂದೇ ಪರಿಹಾರ ಎಂದು ನಿರ್ಧರಿಸಿಬಿಟ್ಟಿದ್ದ.
ಎರಡು ದಿನ ಮನೆಯಲ್ಲಿ ವಿಷ ಇಟ್ಟುಕೊಂಡು ಕಾಯುತ್ತಿದ್ದ. ಆತ್ಮಹತ್ಯೆಗೆ ಶರಣಾಗುವ ದಿನ ಮನೆಯಲ್ಲಿ ಗೆಳೆಯನ ಜೊತೆಗೆ ಭಾರತ ಇಂಗ್ಲೆಂಡ್ ನಡುವಿನ ಕ್ರಿಕೆಟ್ ಪಂದ್ಯ ವೀಕ್ಷಿಸಿದ್ದ. ಯಾವಾಗ ಗೆಳೆಯ ರಜತ್ ಮನೆಯಿಂದ ವಾಪಸ್ಸು ಹೋದನೋ ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪತ್ನಿ ಕಿರುಕುಳದಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಮೃತ ಅಭಿನವ್ ಸಿಂಗ್ ಅವರ ಕುಟುಂಬಸ್ಥರು ಆರೋಪಿಸಿದ್ದು, ಈ ಸಂಬಂಧ ಮಾರತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿವಿಧ ಆಯಾಮಾಗಳಲ್ಲಿ ತನಿಖೆ ನಡೆಸಿದ್ದಾರೆ.