ಬೆಂಗಳೂರು: ಹದಿನೇಳನೇ ಸೀಸನ್ ನ ಐಪಿಎಲ್ ಟೂರ್ನಿಯಲ್ಲಿ ಆರ್ ಸಿಬಿಯ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸ್ಫೋಟಕ ಪ್ರದರ್ಶನ ತೋರಿ ಲೀಡಿಂಗ್ ರನ್ ಸ್ಕೋರರ್ ಆಗುತ್ತಾರೆ ಎಂದು ಮಿಸ್ಟರ್ 360 ಬ್ಯಾಟರ್ ಎಬಿಡಿ ವಿಲಿಯರ್ಸ್ ಭವಿಷ್ಯ ನುಡಿದಿದ್ದಾರೆ. ವಿಶ್ವದ ಐಷಾರಾಮಿ ಟಿ20 ಕ್ರಿಕೆಟ್ ಲೀಗ್ ನಲ್ಲಿ ಕೊಹ್ಲಿ 130.02 ಸ್ಟ್ರೆಕ್ ರೇಟ್ ನಲ್ಲಿ 7263 ರನ್ ಬಾರಿಸಿ ಸರ್ವಶ್ರೇಷ್ಠ ಲೀಡಿಂಗ್ ಸ್ಕೋರರ್ ಆಗಿದ್ದಾರೆ.
ಐಪಿಎಲ್ ಟೂರ್ನಿ ಇತಿಹಾಸದಲ್ಲಿ ರನ್ ಮಷೀನ್ ವಿರಾಟ್ ಕೊಹ್ಲಿ, ಏಳು ಶತಕ ಹಾಗೂ 50 ಅರ್ಧಶತಕ ಸಿಡಿಸಿದ್ದಾರೆ. 2023ರ ಐಪಿಎಲ್ ಟೂರ್ನಿಯಲ್ಲಿ 35ರ ಹರಯದ ಬ್ಯಾಟರ್ 139.82 ಸ್ಟ್ರೆಕ್ ರೇಟ್ ನಲ್ಲಿ ಎರಡು ಶತಕ ಹಾಗೂ ಆರು ಅರ್ಧಶತಕ ನೆರವಿನಿಂದ 639 ರನ್ ಗಳಿಸಿ ನಾಲ್ಕನೇ ಗರಿಷ್ಠ ಸ್ಕೋರರ್ ಆಗಿದ್ದರು. ಆದರೂ ಆರ್ ಸಿಬಿ ಅಂಕಪಟ್ಟಿಯಲ್ಲಿ ಆರನೇ ಸ್ಥಾನ ಪಡೆದು ಪ್ಲೇಆಫ್ ಗೇರುವ ಅವಕಾಶ ತಪ್ಪಿಸಿಕೊಂಡಿತ್ತು.
ರಾತ್ರಿ ಅನ್ನ ಉಳಿದರೆ ಅದನ್ನು ಬಿಸಾಡಬೇಡಿ! ಅದರ ಸೇವನೆಯಿಂದಾಗುವ ಪ್ರಯೋಜನ ತಿಳಿದ್ರೆ ಶಾಕ್ ಆಗ್ತಿರಾ.!
ಹದಿನೇಳನೇ ಆವೃತ್ತಿಯ ಐಪಿಎಲ್ ಟೂರ್ನಿಯ ನಿಮಿತ್ತ ತಮ್ಮದೇ ಆದ ಅಧಿಕೃತ ಯುಟ್ಯೂಬ್ ಚಾನೆಲ್ ನಲ್ಲಿ ಅಪ್ ಲೋಡ್ ಮಾಡಿರುವ ವಿಡಿಯೋದಲ್ಲಿ ಮಾತನಾಡಿರುವ ಮಿಸ್ಟರ್ 360 ಬ್ಯಾಟರ್ ಎಬಿಡಿ ವಿಲಿಯರ್ಸ್, ಆರ್ ಸಿಬಿ ಸ್ಟಾರ್ ಬ್ಯಾಟರ್ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ರನ್ ಗಳ ಹೊಳೆ ಹರಿಸುತ್ತಾರೆ ಎಂದು ಹೇಳಿದ್ದಾರೆ.
“ವಿರಾಟ್ ಕೊಹ್ಲಿ ನಿಜಕ್ಕೂ ಧೀಮಂತ ಆಟಗಾರ. 200 ಕ್ಕೂ ಹೆಚ್ಚು ಐಪಿಎಲ್ ಪಂದ್ಯಗಳಿಂದ 7000ಕ್ಕೂ ಹೆಚ್ಚು ರನ್ ಬಾರಿಸಿದ್ದಾರೆ. ಅದು ನಿಜಕ್ಕೂ ಅದ್ಭುತವಾಗಿದೆ. ಅಲ್ಲದೆ ಇದು ಅವರ ಕ್ರಿಕೆಟ್ ಜೀವನವನ್ನು ಬಿಂಬಿಸುತ್ತದೆ. ವಿರಾಟ್ ಕೊಹ್ಲಿ ಅವರು ಕಳೆದೆರಡು ತಿಂಗಳಿಂದ ಕ್ರಿಕೆಟ್ ಅಂಗಳದಿಂದ ದೂರ ಉಳಿದಿದ್ದರೂ ಈಗ ಮರಳಿ ಬಂದಿದ್ದಾರೆ. ಈ ಸೀಸನ್ ನಲ್ಲಿ ಅವರ ಬ್ಯಾಟ್ ನಿಂದ ಮೂಡಿ ಬರುವ ಸ್ಫೋಟಕ ಇನಿಂಗ್ಸ್ ಅನ್ನು ನೋಡಲು ನಾನಿನ್ನು ಕಾಯಲಾರೆ,” ಎಂದು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಹೇಳಿದ್ದಾರೆ.