ಹುಬ್ಬಳ್ಳಿ: ಭಾರತದ ನೆಲದಲ್ಲಿ ನಡೆಯುತ್ತಿರುವ ವಿಶ್ವಕಸಪ್ ಕ್ರಿಕೆಟ್ ಪಂದ್ಯಾವಳಿಯ್ಲಿ ಭಾರತದ ಕ್ರಿಕೆಟ್ ತಂಡ ಸತತ 9 ಪಂದ್ಯಗಳಲ್ಲಿ ಜಯ ಸಾಧಿಸಿ ವಿಶ್ವಕಪ್ ಫನಲ್ ಪ್ರವೇಶಿಸಿದ್ದು, ಭಾರತ ತಂಡದ ಆಟಗರಾರ ಸಂಘಟಿತ ಹೋರಾಟಕ್ಕೆ ಸಿಕ್ಕ ದೊಡ್ಡ ಜಯವಾಗಿದೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಅಭಿನಂದಿಸಿದ್ದಾರೆ.
ವಯಸ್ಸಾದಂತೆ ಈ ನೋವುಗಳು ನಿಮ್ಮನ್ನ ಕಾಡುತ್ತಿದ್ದರೆ.. ಇಲ್ಲಿದೆ ಉಚಿತ ಸಲಹೆ ಸರಳ ಚಿಕಿತ್ಸೆ- ಪರಿಹಾರ
ಬುಧವಾರ ಮುಂಬೈನ ವಾಂಕಡೆ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್ ಕೊಹಿಲಿಯ ದಾಖಲೆಯ 50ನೇ ಶತಕ ಮತ್ತು ಶ್ರೇಯಸ್ ಅಯ್ಯರ್ ಅವರ ಶತಕದ ನೆರವಿನಿಂದ ಬೃಹತ್ ಮೊತ್ತ ಪೇರಿಸಿ, ಮೊಹಮ್ಮದ ಶಮಿಯ ಕರಾರುವಕ್ಕ ದಾಳಿಯಿಂದ ನ್ಯೂಜಿಲೆಂಡ್ ವಿರುದ್ಧ ಐತಿಹಾಸಿಕ ಜಯಗಳಿಸಿದ್ದು ಶ್ಲಾಘನೀಯ. ವಿಶ್ವಕಪ್ನ ಅಂತಿಮ ಪಂದ್ಯ ಗೆದ್ದುಕೊಂಡು ಮೂರನೇ ಬಾರಿಗೆ ವಿಶ್ವಕಪ್ಪ ಕಿರಿಟ ಮುಡಿಗೇರಿಸಿಕೊಳ್ಳಲಿ ಎಂದು ಭಾರತೀಯ ಕ್ರಿಕೆಟ್ ತಂಡಕ್ಕೆ ಶಾಸಕ ಪ್ರಸಾದ ಅಬ್ಬಯ್ಯ ಶುಭ ಕೋರಿದ್ದಾರೆ.