ನವದೆಹಲಿ: ಸಂಸದ ಸಂಜಯ್ ಸಿಂಗ್ (Sanjay Singh) ಬದಲಿಗೆ ರಾಘವ್ ಛಡ್ಡಾ (Raghav Chadha) ಅವರನ್ನು ರಾಜ್ಯಸಭೆಯ ಪಕ್ಷದ ನಾಯಕನಾಗಿ ಆಯ್ಕೆ ಮಾಡಿದೆ ಎಂದು ಆಮ್ ಅದ್ಮಿ ಪಕ್ಷ ತಿಳಿಸಿದೆ. ರಾಜ್ಯಸಭಾ ಅಧ್ಯಕ್ಷರಿಗೆ ಪತ್ರ ಬರೆದಿರುವ ಎಎಪಿ ಪಕ್ಷದ ನಾಯಕತ್ವವು ಸಂಜಯ್ ಸಿಂಗ್ ಅವರ ಅನುಪಸ್ಥಿತಿಯಲ್ಲಿ ರಾಘವ್ ಚಡ್ಡಾ ಅವರು ಇನ್ನು ಮುಂದೆ ಮೇಲ್ಮನೆಯಲ್ಲಿ ಪಕ್ಷದ ನಾಯಕರಾಗಿರುತ್ತಾರೆ ಎಂದು ಉಲ್ಲೇಖಿಸಿದೆ.
ಸಂಜಯ್ ಸಿಂಗ್ ಹೊಸ ಮದ್ಯ ನೀತಿ ಪ್ರಕರಣದಲ್ಲಿ ಇಡಿ ಬಂಧನಕ್ಕೊಳಕ್ಕಾಗಿ ಸದ್ಯ ನ್ಯಾಯಂಗ ಬಂಧನದಲ್ಲಿದ್ದಾರೆ. ಅವರ ಜಾಮೀನು ಅರ್ಜಿಗಳು ವಜಾಗೊಂಡಿರುವ ಹಿನ್ನೆಲೆ ರಾಜ್ಯಸಭೆಯಲ್ಲಿ ಕಲಾಪಗಳಿಗೆ ಪೂರಕವಾಗುವಂತೆ ಹೊಸ ನಾಯಕತ್ವವನ್ನು ಆಯ್ಕೆ ಮಾಡಲಾಗಿದೆ. ಚಡ್ಡಾ ಅವರನ್ನು ಅದರ ಫ್ಲೋರ್ ಲೀಡರ್ ಆಗಿ ನೇಮಿಸುವ ಕುರಿತು ಎಎಪಿಯಿಂದ (AAP) ಪತ್ರವನ್ನು ಸ್ವೀಕರಿಸಲಾಗಿದೆ ಎಂದು ರಾಜ್ಯಸಭಾ ಸಚಿವಾಲಯದ ಮೂಲಗಳು ಖಚಿತಪಡಿಸಿವೆ.
DK Shivkumar: ಪ್ರತಾಪ್ ಸಿಂಹರನ್ನು ಟ್ರ್ಯಾಪ್ ಮಾಡಲಾಗ್ತಿದೆ ಆರೋಪಕ್ಕೆ ಡಿಕೆಶಿ ಹೇಳಿದ್ದೇನು?
ಪತ್ರವು ಅನುಷ್ಠಾನಕ್ಕಾಗಿ ರಾಜ್ಯಸಭಾ ಪ್ರಧಾನ ಕಾರ್ಯದರ್ಶಿ ಬಳಿ ಇದೆ ಎಂದು ಹೇಳಲಾಗಿದೆ. ರಾಘವ್ ಚಡ್ಡಾ ಅವರು ರಾಜ್ಯಸಭೆಯ ಅತ್ಯಂತ ಕಿರಿಯ ಸದಸ್ಯರಲ್ಲಿ ಒಬ್ಬರಾಗಿದ್ದಾರೆ. ನಿಯಮಗಳ ಉಲ್ಲಂಘನೆ ಹಿನ್ನೆಲೆ ಇತ್ತಿಚೇಗೆ ಕಲಾಪಗಳಿಂದ ಅಮಾನತುಗೊಳಿಸಲಾಗಿತ್ತು. ಸದ್ಯ ಅನಮಾತು ವಾಪಸ್ ಪಡೆಯಲಾಗಿದೆ. ಪ್ರಸ್ತುತ ರಾಜ್ಯಸಭೆಯಲ್ಲಿ ಎಎಪಿ ಒಟ್ಟು 10 ಸಂಸದರನ್ನು ಹೊಂದಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಟಿಎಂಸಿ ನಂತರ ಎಎಪಿ ರಾಜ್ಯಸಭೆಯಲ್ಲಿ ನಾಲ್ಕನೇ ಅತಿದೊಡ್ಡ ಬಲವನ್ನು ಹೊಂದಿದೆ.