ನವದೆಹಲಿ:- ಯುವತಿಗೆ ವಿಡಿಯೋ ಕಾಲ್ ನಲ್ಲಿ ಖಾಸಗಿ ಅಂಗ ತೋರಿಸಿದ್ದಾರೆಂಬ ಆರೋಪವೊಂದು ಪಂಜಾಬ್ ಸಚಿವನ ವಿರುದ್ಧ ಕೇಳಿ ಬಂದಿದೆ.
Karnataka weather: ಮುಂದಿನ 5 ದಿನ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆ..!
21 ವರ್ಷದ ಯುವತಿಯೊಬ್ಬಳಿಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಆಕೆಗೆ ಲೈಂಗಿಕ ದೌರ್ಜನ್ಯ ನೀಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಬಿಜೆಪಿ ನಾಯಕ ತಜೀಂದರ್ ಪಾಲ್ ಸಿಂಗ್ ಬಗ್ಗಾ ಅವರು ಈ ಆರೋಪಗಳನ್ನು ಬೆಳಕಿಗೆ ತಂದಿದ್ದು, ಬಾಲ್ಕರ್ ಸಿಂಗ್ ಅವರು ಅನುಚಿತ ಲೈಂಗಿಕ ನಡವಳಿಕೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ.
ವಿಡಿಯೋ ಕರೆಯಲ್ಲಿ ಬಾಲ್ಕರ್ ಸಿಂಗ್ ಅವರು ಆ ಮಹಿಳೆಯ ಬಳಿ ಬಟ್ಟೆ ಬಿಚ್ಚಲು ಒತ್ತಾಯಿಸಿದ್ದಾರೆ. ಅಲ್ಲದೆ, ಆಕೆಗೆ ತಮ್ಮ ಖಾಸಗಿ ಅಂಗಗಳನ್ನು ತೋರಿಸಿದ್ದಾರೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ. ಈ ಆರೋಪಗಳನ್ನು ಗಮನಿಸಿದ ರಾಷ್ಟ್ರೀಯ ಮಹಿಳಾ ಆಯೋಗ ಆರೋಪಗಳನ್ನು ತನಿಖೆ ಮಾಡಿ ಮೂರು ದಿನಗಳಲ್ಲಿ ವರದಿ ಸಲ್ಲಿಸುವಂತೆ ಪಂಜಾಬ್ ಪೊಲೀಸರಿಗೆ ಸೂಚಿಸಿದೆ.
ರಾಷ್ಟ್ರೀಯ ಮಹಿಳಾ ಆಯೋಗ (ಎನ್ಸಿಡಬ್ಲ್ಯು) ಸೋಮವಾರ ಪಂಜಾಬ್ ಸಚಿವ ಬಾಲ್ಕರ್ ಸಿಂಗ್ ವಿರುದ್ಧದ ಲೈಂಗಿಕ ದೌರ್ಜನ್ಯದ ಆರೋಪಗಳ ಕುರಿತು ತ್ವರಿತ ತನಿಖೆಗೆ ಕರೆ ನೀಡಿದೆ ಮತ್ತು 3 ದಿನಗಳಲ್ಲಿ ರಾಜ್ಯ ಪೊಲೀಸರಿಂದ ವರದಿ ಕೇಳಿದೆ. ಬಿಜೆಪಿ ನಾಯಕ ತಜಿಂದರ್ ಪಾಲ್ ಸಿಂಗ್ ಬಗ್ಗಾ, ಆಪ್ ಶಾಸಕ ಬಾಲ್ಕರ್ ಸಿಂಗ್ ಅವರು ಅನುಚಿತ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿರುವ ಹಿನ್ನೆಲೆಯಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು ಪಂಜಾಬ್ ಡಿಜಿಪಿ ಗೌರವ್ ಯಾದವ್ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ