ಬಾಲಿವುಡ್ ಸ್ಟಾರ್ ಆಮೀರ್ ಖಾನ್ (Aamir Khan) ಪುತ್ರಿ ಇರಾ ಖಾನ್ (Ira Khan)- ನೂಪುರ್ ಶಿಖರೆ ಜೋಡಿ ಜ.10ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಮುಂಬೈನ ಪ್ರತಿಷ್ಟಿತ ರೆಸಾರ್ಟ್ವೊಂದರಲ್ಲಿ ಅದ್ದೂರಿ ಆರತಕ್ಷತೆ (Reception) ಆಯೋಜಿಸಿದ್ದಾರೆ. ಈ ಸಮಾರಂಭಕ್ಕೆ ಸಲ್ಮಾನ್ ಖಾನ್, ಶಾರುಖ್ ಖಾನ್ (Sharukh Khan) ದಂಪತಿ ಸೇರಿದಂತೆ ಅನೇಕರು ಭಾಗಿದ್ದಾರೆ.
ಮುದ್ದಿನ ಮಗಳು ಇರಾ ಖಾನ್- ನೂಪುರ್ ಮದುವೆಯ ಬಳಿಕ ಆರತಕ್ಷತೆ ಗ್ರ್ಯಾಂಡ್ ಆಗಿ ಹಮ್ಮಿಕೊಂಡಿದ್ದಾರೆ. ನೂಪುರ್ ಕಪ್ಪು ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದರೆ, ಇರಾ ಕೆಂಪು ಲೆಹೆಂಗಾ ಧರಿಸಿ ಮಿಂಚಿದ್ದಾರೆ
ಇರಾ ಆರತಕ್ಷತೆ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್, ಗೌರಿ- ಶಾರುಖ್ ಖಾನ್ ಜೋಡಿ, ರಣ್ಬೀರ್ ಕಪೂರ್, ಕತ್ರಿನಾ ಕೈಫ್, ಜಯಾ ಬಚ್ಚನ್, ಸುಶ್ಮಿತಾ ಸೇನ್, ತೆಲುಗು ನಟ ನಾಗಚೈತನ್ಯ, ಫರ್ಹಾನ್ ಅಖ್ತರ್, ಜೆನಿಲಿಯಾ ದೇಶ್ಮುಖ್, ಅದಿತಿ- ಸಿದ್ಧಾರ್ಥ್ ಜೋಡಿ, ಅನಿಲ್ ಕಪೂರ್, ಹೇಮಾ ಮಾಲಿನಿ, ರೇಖಾ ಸೇರಿದಂತೆ ಅನೇಕರು ಭಾಗಿಯಾಗುವ ಮೂಲಕ ನವಜೋಡಿಗೆ ಶುಭಕೋರಿದ್ದಾರೆ.