ಇತ್ತಿಚೆಗೆ ಬಾಲಿವುಡ್ ಸೂಪರ್ ಸ್ಟಾರ್ ಆಮಿರ್ ಖಾನ್ ಬಿಕ್ಷುಕನ ವೇಷ ಧರಿಸ ಮುಂಬೈ ಬೀದಿಗಳಲ್ಲಿ ಒಡಾಡಿದ್ದರು. ಈ ವಿಡಿಯೋ ಸಖತ್ ವೈರಲ್ ಆಗಿತ್ತ. ಅಷ್ಟೇ ಅಲ್ಲ ಆಮಿರ್ ಭರ್ಜರಿ ಡ್ಯಾನ್ಸ್ ಕೂಡ ಮಾಡಿದ್ದರು. ಅವರು ಇಷ್ಟೆಲ್ಲ ಮಾಡಿದ್ದು ಹಣಕ್ಕಾಗಿ! ಹೀಗೊಂದು ವಿಚಾರ ಈಗ ರಿವೀಲ್ ಆಗಿದೆ. ಇದು ತಿಳಿದ ಬಳಿಕ ಫ್ಯಾನ್ಸ್ ಆಮಿರ್ ಖಾನ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಆಮಿರ್ ಖಾನ್ ಅವರು ಹಲವು ಬ್ರ್ಯಾಂಡ್ಗಳ ಪ್ರಚಾರ ಮಾಡುತ್ತಾರೆ. ಇದರ ಪ್ರಚಾರದ ಭಾಗವಾಗಿ ಅವರು ಈ ರೀತಿ ವೇಷ ಧರಿಸಿದ್ದಾರೆ. ಹೌದು, ಕೋಕಾ ಕೋಲಾ ಇಂಡಿಯಾ ‘ಚಾರ್ಜ್ಡ್’ ಹೆಸರಿನ ಪಾನೀಯವನ್ನು ಪರಿಚಯಿಸಿದೆ. ಇದರ ಪ್ರಮೋಷನ್ಗೆ ಆಮಿರ್ ಖಾನ್ ಅವರನ್ನು ಸಂಸ್ಥೆ ಬಳಸಿಕೊಂಡಿದೆ. ಇದನ್ನು ಕುಡಿದ ಬಳಿಕ ಭಿನ್ನವಾಗಿ ಡ್ಯಾನ್ಸ್ ಮಾಡುವ ರೀತಿಯಲ್ಲಿ ತೋರಿಸಲಾಗಿದೆ.
ಆಮಿರ್ ಖಾನ್ ಅವರು ಮುಂಬೈ ಬೀದಿಯಲ್ಲಿ ಭಿನ್ನ ವೇಷ ತೊಟ್ಟು ತಿರುಗಾಡುವಾಗ ಯಾರೊಬ್ಬರಿಗೂ ಅದು ಆಮಿರ್ ಖಾನ್ ಎಂಬುದು ತಿಳಿಯಲಿಲ್ಲ. ಅವರನ್ನು ಯಾರು ಗುರತಿಸಲೂ ಇಲ್ಲ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಅವರ ಫೋಟೋ ಹಂಚಿಕೊಂಡಾಗ ಈ ವಿಚಾರ ರಿವೀಲ್ ಆಯಿತು. ಆ ಬಳಿಕ ಆಮಿರ್ ಖಾನ್ನ ಭೇಟಿ ಮಾಡುವ ಅವಕಾಶ ತಪ್ಪಿಸಿಕೊಂಡಿದ್ದಕ್ಕೆ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.
ಹಣಕ್ಕಾಗಿ ಆಮಿರ್ ಖಾನ್ ಈ ರೀತಿ ವೇಷ ಹಾಕಿದ್ದಕ್ಕೆ ಹಲವರು ಟೀಕೆ ಮಾಡಿದ್ದಾರೆ. ಇನ್ನೂ ಕೆಲವರು ಈ ರೀತಿಯ ಕಾನ್ಸೆಪ್ಟ್ ಬಳಿಸಿಕೊಂಡಿದ್ದರಿಂದ ಬ್ರ್ಯಾಂಡ್ ಗೆ ಭರ್ಜರಿ ಪ್ರಚಾರ ಸಿಕ್ಕಿದೆ ಎಂದಿದ್ದಾರೆ.