ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಯುಐ ಸಿನಿಮಾ ರಿಲೀಸ್ ಗೆ ಇನ್ನೆನ್ನೂ ಕೆಲವೇ ಕೆಲವು ದಿನಗಳು ಮಾತ್ರವೇ ಭಾಕಿ ಇದೆ. ಈಗಾಗಲೇ ಟ್ರೇಲರ್ ಮತ್ತು ಹಾಡುಗಳ ಮೂಲಕ ಯುಐ ಸಾಕಷ್ಟು ಮಾಡುತ್ತಿದೆ. ಡಿಸೆಂಬರ್ 20ರಂದು ಸಿನಿಮಾ ರಿಲೀಸ್ ಆಗಲಿದ್ದು ಇದೀಗ ಸಿನಿಮಾದಬಗ್ಗೆ ಬಾಲಿವುಡ್ ನಟ ಆಮಿರ್ ಖಾನ್ ಮಾತನಾಡಿದ್ದಾರೆ. ವಿಶೇಷ ಏನೆಂದರೆ, ‘ನಾನು ಉಪೇಂದ್ರ ಅವರ ದೊಡ್ಡ ಅಭಿಮಾನಿ’ ಎಂದು ಹೇಳಿದ್ದಾರೆ.
‘ಯುಐ’ ಸಿನಿಮಾದ ಬಿಡುಗಡೆ ಹೊಸ್ತಿಲಿನಲ್ಲಿ ನಟ, ನಿರ್ದೇಶಕ ಉಪೇಂದ್ರ ಅವರು ಆಮಿರ್ ಖಾನ್ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಆಮಿರ್ ಖಾನ್ ಅವರು ‘ಯುಐ’ ಚಿತ್ರದ ಟ್ರೇಲರ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೇ, ಉಪೇಂದ್ರ ಅವರ ಪ್ರತಿಭೆಯನ್ನು ಕೂಡ ಆಮಿರ್ ಖಾನ್ ಹೊಗಳಿದ್ದಾರೆ. ಉಪೇಂದ್ರರನ್ನು ಆಮೀರ್ ಖಾನ್ ಹೊಗಳಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
‘ನಾನು ಈಗ ಉಪೇಂದ್ರ ಜೊತೆ ಇದ್ದೇನೆ. ಅವರ ಸಿನಿಮಾ ಡಿಸೆಂಬರ್ 20ರಂದು ಬಿಡುಗಡೆ ಆಗುತ್ತಿದೆ. ನಾನು ಅವರ ದೊಡ್ಡ ಅಭಿಮಾನಿ. ಟ್ರೇಲರ್ ಅದ್ಭುತವಾಗಿದೆ. ಅದನ್ನು ಕಂಡು ನಾನು ಆಶ್ವರ್ಯಚಕಿತನಾದೆ. ನನ್ನ ಸ್ನೇಹಿತ ಉಪೇಂದ್ರ ಅವರು ಎಂಥ ಅದ್ಭುತವಾದ ಟ್ರೇಲರ್ ಮಾಡಿದ್ದಾರೆ’ ಎಂದು ಆಮಿರ್ ಖಾನ್ ಅವರು ಮನಸಾರೆ ಹೊಗಳಿ ಉಪೇಂದ್ರ ಅವರ ಬೆನ್ನು ತಟ್ಟಿದ್ದಾರೆ.
‘ಈ ಸಿನಿಮಾ ದೊಡ್ಡ ಹಿಟ್ ಆಗಲಿದೆ. ಹಿಂದಿ ಪ್ರೇಕ್ಷಕರು ಕೂಡ ತುಂಬ ಇಷ್ಟಪಡಲಿದ್ದಾರೆ. ನಾನಂತೂ ಟ್ರೇಲರ್ ನೋಡಿ ಶಾಕ್ ಆದೆ. ನಿಮಗೆ ನಾನು ಶುಭ ಹಾರೈಸುತ್ತೇನೆ. ಈ ಸಿನಿಮಾ ದೊಡ್ಡ ಯಶಸ್ಸು ಕಾಣಲಿ’ ಎಂದು ಆಮಿರ್ ಖಾನ್ ವಿಶ್ ಮಾಡಿದ್ದಾರೆ. ಅವರ ಈ ಮಾತುಗಳನ್ನು ಕೇಳಿದ ಬಳಿಕ ಹಿಂದಿ ಪ್ರೇಕ್ಷಕರಿಗೆ ‘ಯುಐ’ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.