ಆಧಾರ್ ಕಾರ್ಡ್ ಅಪ್ಡೇಟ್ ಮಾಡುವವರಿಗೆ ಮತ್ತೊಂದು ಅವಕಾಶ ನೀಡಲಾಗಿದೆ. ಆಧಾರ್ ಅಪ್ಡೇಟ್ಗಾಗಿ ದಾಖಲೆಗಳನ್ನು ಅಪ್ಲೋಡ್ ಮಾಡುವ ಕೊನೆಯ ದಿನಾಂಕವನ್ನು ಡಿಸೆಂಬರ್ 14 ರವರೆಗೆ ಮುಂದೂಡಲಾಗಿದೆ.
ಐಡಿ ಪ್ರೂಪ್, ವಿಳಾಸ ಪುರಾವೆಯ ಮಾಹಿತಿಯನ್ನು ಡಿಸೆಂಬರ್ 14ರವರೆಗೆ ಅಪ್ಲೋಡ್ ಮಾಡಬಹುದು. UIDAI ನೀಡಿದ ಗಡುವಿನೊಳಗೆ ನೀವು ಈ ಕಾರ್ಯವನ್ನು ಪೂರ್ಣಗೊಳಿಸಬೇಕು.
ಆಧಾರ್ ಕಾರ್ಡ್ ನವೀಕರಿಸಲು ಗೆಜೆಟ್ ಅಗತ್ಯವಿದೆ. ಈ ನಿಟ್ಟಿನಲ್ಲಿ ಯುಐಡಿಎಐ ಹೊಸ ನಿರ್ಧಾರ ಕೈಗೊಂಡಿದೆ. ಹೆಸರು ಬದಲಾವಣೆಗೆ ಸಂಬಂಧಿಸಿದಂತೆ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ವಂಚನೆಗೆ ಕಡಿವಾಣ ಹಾಕಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಈಗ ಹೆಸರು ಬದಲಾಯಿಸಬೇಕಾದರೆ ಗೆಜೆಟ್ ಪೇಪರ್ ಕೊಡಬೇಕು. ಇತರ ಬದಲಾವಣೆಗಳನ್ನೂ ಸಹ ಮಾಡಬಹುದು. ಆದರೆ ಅದಕ್ಕಾಗಿ ನೀವು ಪೋಷಕ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಈ ಕುರಿತು ಇತ್ತೀಚೆಗೆ ನಿರ್ಧಾರ ಕೈಗೊಳ್ಳಲಾಗಿದೆ.
ನೀವು ಯುಐಡಿಎಐ ಕೇಂದ್ರಕ್ಕೆ ಭೇಟಿ ನೀಡುವ ಮೂಲಕವೂ ಅಪ್ಡೇಟ್ ಮಾಡಬಹುದು. ನೀವು DOBನಲ್ಲಿ ಯಾವುದೇ ತಿದ್ದುಪಡಿಗಳನ್ನು ಮಾಡಲು ಬಯಸಿದರೆ ನೀವು ಆಧಾರ್ ಕೇಂದ್ರಕ್ಕೆ ಭೇಟಿ ನೀಡಬೇಕು. ಏಕೆಂದರೆ ಈ ಬದಲಾವಣೆಯನ್ನು ಆನ್ಲೈನ್ನಲ್ಲಿ ಮಾಡಲಾಗುವುದಿಲ್ಲ. ಅದಕ್ಕಾಗಿ ಹತ್ತಿರದ ಕೇಂದ್ರಕ್ಕೆ ಹೋಗುವುದು ಕಡ್ಡಾಯವಾಗಿರುತ್ತದೆ.