ಹಾವೇರಿ:- ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ಅಪಹರಣ ಕೇಸ್ ದಾಖಲಾಗಿದ್ದು, ಪ್ರೀತಿಸಲು ನಿರಾಕರಿಸಿದ B.ed ವಿದ್ಯಾರ್ಥಿನಿಯನ್ನು ಪಾಗಲ್ಪ್ರೇಮಿಯೊಬ್ಬ ಅಪಹರಿಸಿದ ಕೆಲವೇ ಗಂಟೆಗಳಲ್ಲಿ ವಿದ್ಯಾರ್ಥಿನಿಯನ್ನು ರಕ್ಷಿಸಿ ಹಾವೇರಿ ಪೊಲೀಸರು ಕರೆತಂದಿರುವಂತಹ ಘಟನೆ ನಡೆದಿದೆ.
ಕಾಲೇಜಿಗೆ ತೆರಳುತ್ತಿದ್ದ ಬಿ.ಇಡಿ ವಿದ್ಯಾರ್ಥಿನಿಯನ್ನು ಹಾವೇರಿಯ ಓಲ್ಡ್ ಪೋಸ್ಟ್ ಆಫೀಸ್ ಬಳಿ ನೆರೆಮನೆ ನಿವಾಸಿ ವಿಷ್ಣು ತಗಡಿನಮನಿ ಹಾಡಹಗಲೇ ಅಪಹರಿಸಿದ್ದ. ತಕ್ಷಣ ಹಾವೇರಿ ನಗರ ಠಾಣೆ ಪೊಲೀಸರಿಗೆ ಪೋಷಕರು ಮಾಹಿತಿ ನೀಡಿದ್ದಾರೆ.
ಬೆಳಿಗ್ಗೆ 9 ಗಂಟೆಗೆ ಯುವತಿಯು ಕಾಲೇಜ್ ಹೋಗುತ್ತಿದ್ದ ವೇಳೆ ಕಾರಿನಲ್ಲಿ ಕಿಡ್ನಾಪ್ ಮಾಡಿಕೊಂಡು ಹೋಗಿದ್ದಾನೆ. ಕಿಡ್ನಾಪ್ ಮಾಡಿದ ಆರೋಪಿಯನ್ನ ವಿಷ್ಣು ತಗಡಿನಮನಿ ಎಂದು ಗುರುತಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಯುವತಿ ರಕ್ಷಣೆಗೆ ಮುಂದಾಗಿದ್ದರು. ಯುವತಿಯನ್ನ ಮೋಟೆಬೆನ್ನೂರು ಬಳಿ ಬಿಟ್ಟು ಆರೋಪಿ ವಿಷ್ಣು ಎಸ್ಕೇಪ್ ಆಗಿದ್ದಾನೆ. ಫೋನ್ ಟ್ರ್ಯಾಕ್ ಮಾಡಿ ಪೊಲೀಸರು ಯುವತಿ ಪತ್ತೆ ಹಚ್ಚಿ ಕರೆತಂದಿದ್ದಾರೆ.ಪೊಲೀಸ್ ಠಾಣೆಗೆ ಯುವತಿಯನ್ನ ಕರೆತರುತ್ತಿದ್ದಂತೆ ತಾಯಿಯನ್ನ ಅಪ್ಪಿ ಯುವತಿ ಗೋಳಾಡಿದ್ಲು. ಈ ವೇಳೆ ಮಗಳ ಜೊತೆ ಪೋಷಕರೂ ಕಣ್ಣೀರು ಹಾಕಿದರು.
ಮಗಳನ್ನ ಕಿಡ್ನಾಪ್ ಮಾಡಿದ ಯುವಕನ ಮೇಲೆ ಯುವತಿ ತಂದೆ ದೇವೇಂದ್ರಪ್ಪ ಕಿಡ್ನಾಪ್ ಕೇಸ್ ದಾಖಲಿಸಿದ್ದಾರೆ. ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಒಂದು ವರ್ಷದಿಂದ ಯುವತಿಯ ಕಾಲೇಜು ಹೋಗುತ್ತಿದ್ದ ವೇಳೆ, ಹಾಸ್ಟಲ್ ಬಳಿ ಮತ್ತು ಬಸ್ ನಿಲ್ದಾಣದ ಬಂದು ಪಾಗಲ್ ಪ್ರೇಮಿ ಪ್ರೀತಿಸು ಅಂತಾ ಕಾಡುತ್ತಿದ್ದ ಎಂದು ಪೊಷಕರು ಆರೋಪಿಸಿದ್ದಾರೆ.ಇದೇ ವಿಚಾರವಾಗಿ ಒಂದು ವಾರದ ಹಿಂದೆ ರಾಜೀ ಪಂಚಾಯಿತಿಕೂಡಾ ಮಾಡಲಾಗಿತ್ತು ಆಗ ಇನ್ನುಮುಂದೆ ನಿಮ್ಮ ಮಗಳ ತಂಟೆಗೆ ಬರುವುದಿಲ್ಲಾ ಎಂದು ಒಪ್ಪಿಕೊಂಡಿದ್ದಾ ಈಗಾ ಮತ್ತೆ ಹೀಗೆ ಮಾಡಿದ್ದಾನೆ ನಮಗೆ ರಕ್ಷಣೆ ಕೊಡಿ ಎಂದು ಅಂಗಲಾಚಿದ್ದಾನೆ.
ಪಾಗಲ್ ಪ್ರೇಮಿ ಪ್ರೀತಿ ನೀರಾಕರಿಸಿದಕ್ಕೆ ಯುವತಿ ಕಿಡ್ನಾಪ್ ಪ್ರಕರಣ ಭೇದಿಸಲು ಹಾವೇರಿ ಪೊಲೀಸರು ಯಶಸ್ವಿಯಾಗಿದ್ದಾರೆ