ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ಕೋರಮಂಗಲದಲ್ಲಿ ಯುವತಿಯ ಬರ್ಬರ ಹತ್ಯೆ ಕೊಲೆ ನಡೆದಿದೆ. ಲೇಡಿಸ್ ಪಿಜಿಯೊಳಗೆ ನುಗ್ಗಿ ಯುವಕತ್ತು ಕೊಯ್ದು ಯುವತಿಯ ಕೊಲೆ ನಡೆದಿದೆ. ಬಿಹಾರ ಮೂಲದ ಕೃತಿ ಕುಮಾರಿ(24) ಮೃತ ಯುವತಿ ಎನ್ನಲಾಗಿದೆ. ಯುವತಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದರು. ಹಾಗೂ ಕೋರಮಂಗಲದ ವಿಆರ್ ಲೇಔಟ್ ಪಿಜಿ ನಲ್ಲಿ ವಾಸವಿದ್ದ ವೇಳೆ ಕೃತ್ಯ ನಡೆದಿದೆ.
ರಾತ್ರಿ 11.10 ರಿಂದ 11.30 ಸುಮಾರಿಗೆ ನಡೆದ ಹತ್ಯೆ ನಡೆದಿದೆ 11.10 ಕ್ಕೆ ಲೇಡಿಸ್ ಪಿಜಿ ಯೊಳಗೆ ಯುವಕ ಬಂದಿದ್ದಾನೆ. ಚಾಕುವಿನ ಜೊತೆಗೆ ಯುವಕ ಆಗಮಿಸಿದ್ದ. ಮೂರನೇ ಮಹಡಿಯಲ್ಲಿರುವ ರೂಂ ಸಮೀಪ ಚಾಕುವಿನಿಂದ ಹಲ್ಲೆ ನಡೆದಿದೆ. ಕತ್ತು ಕೊಯ್ದು ಆರೋಪಿಯ ಹತ್ಯೆ ಮಾಡಲಾಗಿದೆ.
ಸ್ಥಳದಲ್ಲಿಯೇ ಕೃತಿ ಕುಮಾರಿ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಕೋರಮಂಗಲ ಪೊಲೀಸರು ಭೇಟಿ ಪರಿಶೀಲನೆ ಮಾಡಿದ್ದಾರೆ.
ಪರಿಚಯಸ್ಥ ಯುವಕನಿಂದಲೇ ಕೃತ್ಯ ಶಂಕೆ ವ್ಯಕ್ತವಾಗಿದೆ. ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.