ಬೆಳಗಾವಿ: ಮೈಸೂರು ಮೂಲದ ವಿವಾಹಿತೆ ಮಹಿಳೆಯೊರ್ವಳು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಮಂಜುಳಾ(22) ಮೃತ ದುರ್ದೈವಿ, ನಾಲ್ಕು ತಿಂಗಳ ಗರ್ಭಿಣಿಯಾಗಿರುವ ಮೃತ ಮಹಿಳೆ. ಒಂದೂವರೆ ವರ್ಷದ ಹಿಂದೆ ಇನ್ಸ್ಟಾಗ್ರಾಂ ಮೂಲಕ ಬೆಳಗಾವಿಯ ಮಚ್ಛೆ ಮೂಲದ ಬಾಳೇಶ ಎಂಬಾತನ ಪರಿಚಯವಾಗಿತ್ತು. ಬೆಳಗಾವಿ ಜಿಲ್ಲೆಯ ಉದ್ಯಮಭಾಗದ ಕೈಗಾರಿಕೆ ಪ್ರದೇಶದಲ್ಲಿ ಕೆಲಸ ಮಾಡ್ತಿದ್ದ ಬಾಳೇಶ.
ಬಾಳೇಶ-ಮಂಜುಳಾ ಇಬ್ಬರು ಇನ್ಸ್ಟಗ್ರಾಮ ಮೂಲಕ ಪರಿಚಯವಾಗಿ ಪರಿಚಯ ಪ್ರೀತಿಗೆ ತಿರುಗಿತ್ತು, ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಇದಕ್ಕೆ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಮನೆಯವರ ವಿರೋಧದ ನಡುವೆಯೂ ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು.
ಪುರುಷರಿಗಿಂತ ಮಹಿಳೆಯರಿಗೆಯೇ ಸೆಕ್ಸ್ʼನಲ್ಲಿ ಆಸಕ್ತಿ ಜಾಸ್ತಿಯಂತೆ.! ಇಲ್ಲಿದೆ ನೋಡಿ ಕಾರಣಗಳು
ಮದುವೆ ಬಳಿಕ ಬಾಳೇಶನ ಜೊತೆಗೆ ಬೆಳಗಾವಿಯಲ್ಲಿ ವಾಸವಾಗಿದ್ದ ಮೃತ ಮಹಿಳೆ. ನಾಲ್ಕು ತಿಂಗಳ ಗರ್ಭಿಣಿ ಯಾಗಿರುವಾಗಲೇ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾಳೆ ಪತಿ ಬೀರೇಶ್ ಮತ್ತು ಕುಟುಂಬದವರೇ ಮಂಜುಳಳನ್ನ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂದು ಮಂಜುಳ ಪೋಷಕರು ಆರೋಪಿಸಿದ್ದಾರೆ.
4 ತಿಂಗಳ ಗರ್ಭೀಣಿಯಾಗಿದ್ದ ಆಕೆಗೆ ಗರ್ಭಫಾತ ಮಾಡಿಸಿಕೊಳ್ಳುವಂತೆ ಪತಿ ಬೀರೇಶ್ ಮತ್ತು ಕುಟುಂಬಸ್ಥರು ಒತ್ತಾಯ ಮಾಡಿದ್ದಾರೆ .ಒಪ್ಪದ ಹಿನ್ನೆಲೆಯಲ್ಲಿ ಹತ್ಯೆಗೈದಿದ್ದಾರೆ. ಕೊಲೆ ಮಾಡಿ ಪತಿ ಬೋರೇಶ್, ಕುಟುಂಬ ಪರಾರಿಯಾಗಿದ್ದಾರೆ ಎಂದು ಮಂಜುಳಾ ಪೋಷಕರು ಆರೋಪಿಸಿದ್ದಾರೆ.. ಎರಡು ದಿನಗಳ ಹಿಂದೆಯೇ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಘಟನೆ ಸಂಬಂಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ವಿಚಾರಣೆ ಮುಂದುವರಿಸಿದ್ದಾರೆ.