ಚಿತ್ರದುರ್ಗ: ಮತದಾನ ಹಕ್ಕನ್ನು ಚಲಾಯಿಸಲು ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು, ಫಿಲಿಫೈನ್ಸ್ ನ ಯುಪಿಹೆಚ್ ಎಸ್ಡಿ ಯೂನಿವರ್ಸಿಟಿಯಿಂದ ಬಂದು ಚಿತ್ರದುರ್ಗ ನಗರದ ಜಿಲ್ಲಾ ಕೈಗಾರಿಕಾ ಕೇಂದ್ರದ ಮತಗಟ್ಟೆ ಸಂಖ್ಯೆ 230 ರಲ್ಲಿ ಮತದಾನ ಮಾಡಿದರು. ವೈದ್ಯಕೀಯ ವಿದ್ಯಾರ್ಥಿ ನಿ ಲಿಖಿತ ಫಿಲಿಫೈನ್ಸ್ ನ ಯುಪಿಹೆಚ್ ಎಸ್ ಡಿ ಯೂನಿವರ್ಸಿಟಿಯಲ್ಲಿ ನಾಲ್ಕನೆ ವರ್ಷದಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ.
ಇದಾದ ನಂತರ ಒಂದು ವರ್ಷ ಇಂಟರನ್ ಶಿಪ್ ಮುಗಿಸಬೇಕಿದೆ. ತಂದೆ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಣಾಧಿಕಾರಿಯಾಗಿ ಕರ್ತವ್ಯನಿರ್ವಹಿಸಿದ್ದು, ನಿವೃತ್ತರಾಗಿದ್ದಾರೆ. ತಾಯಿ ಹೌಸ್ ವೈಫ್ ಆಗಿದ್ದು ಲಿಖಿತ ತನ್ನ ಹಕ್ಕನ್ನು ಚಲಾಯಿಸಿ ಮಾಧ್ಯಮಗಳಿಗೆ ಮಾತಾಡಿ, ನಮ್ಮ ಜವಾಬ್ದಾರಿಯಿಂದ ಮತ ಹಾಕದೆ ಹಿಂದೆ ಸರಿಯಬಾರದು, ಮತದಾನದಿಂದ ಉತ್ತಮ ನಾಯಕನನ್ನು ಆಯ್ಕೆ ಮಾಡಲು ಆಗುತ್ತದೆ ಎಂದರು.