ಬೆಳಗಾವಿ: ಮದುವೆ ಖುಷಿಯಲ್ಲಿದ್ದ ಯುವಕ ಮಸಣ ಸೇರಿದ್ದಾನೆ. ಕುಡಿದು ಬಂದು ಗಲಾಟೆ ಮಾಡುತ್ತಿದ್ದವನನ್ನು ಅಣ್ಣ ಮತ್ತು ತಂದೆ ಸೇರಿ ಕೊಲೆ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಚಿಕ್ಕ ನಂದಿಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.
ಮಂಜುನಾಥ್ ಉಳ್ಳಾಗಡ್ಡಿ (25) ಅಣ್ಣ ಮತ್ತು ತಂದೆಯಿಂದ ಕೊಲೆಯಾದ ಯುವಕನಾಗಿದ್ದು, ತಂದೆ ನಾಗಪ್ಪ ಮತ್ತು ಅಣ್ಣ ಗುರುಬಸಪ್ಪ ಉಳ್ಳಾಗಡ್ಡಿ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಕಲ್ಲು ಮತ್ತು ಇಟ್ಟಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆಗೈಯ್ಯಲಾಗಿದೆ. ತಮ್ಮನ ಮದುವೆಗೆಂದು ಸೇನೆಯಲ್ಲಿದ್ದ ಅಣ್ಣ ರಜೆ ಮೇಲೆ ಬಂದಿದ್ದ. ತಡರಾತ್ರಿ ಕುಡಿದು ಬಂದು ಕಿರಿಕಿರಿ ಮಾಡುತ್ತಿದ್ದಕ್ಕೆ ಜಗಳ ಶುರುವಾಗಿದೆ. ಅಣ್ಣತಮ್ಮಂದಿರ ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯಗೊಂಡಿದೆ.
ಶಹಾಪೂರ ಅರಣ್ಯ ಪ್ರದೇಶದಲ್ಲಿ ಬೆಂಕಿ ; ಅಪಾರ ಪ್ರಮಾಣದ ಸಸ್ಯಸಂಪತ್ತು ನಾಶ
ಮಾ.12ರಂದು ಕೊಲೆಯಾದ ಮಂಜುನಾಥ್ ಮದುವೆ ನಿಗದಿಯಾಗಿತ್ತು. ಮದುವೆಯಾಗಬೇಕಿದ್ದ ಯುವಕ ಕುಟುಂಬಸ್ಥರಿಂದಲೇ ಹತ್ಯೆಯಾಗಿದ್ದಾನೆ. ಸದ್ಯ ಘಟನಾ ಸ್ಥಳಕ್ಕೆ ಕಿತ್ತೂರು ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಸದ್ಯ ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಬಿಮ್ಸ್ ಆಸ್ಪತ್ರೆಗೆ ಮಾಡಲಾಗಿದೆ.