ಹಾಸನ:- ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಗೋಪನಹಳ್ಳಿಯಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ದಾಳಿ ಮಾಡಿದ ಚಿರತೆಯೊಂದಿಗೆ ಹೋರಾಡಿ ಯುವಕ ಪ್ರಾಣ ಉಳಿಸಿಕೊಂಡಿರುವಂತಹ ರೋಚಕ ಘಟನೆಯೊಂದು ಜರುಗಿದೆ.
ನವೀನ್ ಚಿರತೆಯಿಂದ ಬಚಾವ್ ಆದ ಯುವಕ ಎನ್ನಲಾಗಿದೆ. ದಾಳಿಯಿಂದಾಗಿ ನವೀನ್ ಕೈ, ಕಾಲಿಗೆ ಗಾಯಗಳಾಗಿವೆ. ಸದ್ಯ ಹೊಳೆನರಸೀಪುರ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ.
Hubballi:ಸ್ಟೈಪಂಡ್ ಹೆಚ್ಚಳಕ್ಕೆ ಆಗ್ರಹಿಸಿ ವೈದ್ಯ ವಿದ್ಯಾರ್ಥಿಗಳ ಪ್ರತಿಭಟನೆ!
ಜಮೀನಿನಲ್ಲಿ ನವೀನ್ ಕೃಷಿ ಕೆಲಸ ಮಾಡುತ್ತಿದ್ದ. ಈ ವೇಳೆ ಏಕಾಏಕಿ ಆತನ ಮೇಲೆ ಚಿರತೆ ದಾಳಿ ಮಾಡಿದೆ. ಕೈಯಲ್ಲಿ ಕುಡುಗೋಲು ಹಿಡಿದಿದ್ದರಿಂದ ಚಿರತೆ ವಿರುದ್ಧ ಸೆಣೆಸಾಡಿದ್ದಾನೆ. ಬಳಿಕ ಕಿರುಚಾಡುತ್ತಿದ್ದಂತೆ ಅಕ್ಕಪಕ್ಕದ ಜನರು ಧಾವಿಸಿದ್ದಾರೆ. ಜನರನ್ನ ನೋಡಿದ ಚಿರತೆ ಕಾಡಿನೊಳಗೆ ಓಡಿ ಹೋಗಿದೆ.
ಸದ್ಯ ನವೀನ್ ದಾಖಲಾಗಿರುವ ಆಸ್ಪತ್ರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.