ಶಿವಮೊಗ್ಗ:– ಭದ್ರಾವತಿ ನಗರದ ಪೇಪರ್ ಟೌನ್ ಬಡಾವಣೆಯ ಆರನೇ ವಾರ್ಡ್ನಲ್ಲಿ ಆನ್ಲೈನ್ ಆ್ಯಪ್ ನಂಬಿ ಹಣ ಕಳೆದುಕೊಂಡ ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಜರುಗಿದೆ.
ಬಾಗಲಕೋಟೆ: ಮೂಲ ಭೂತ ಸೌಕರ್ಯ ಮರೀಚಿಕೆ; ಬಹಿರ್ದೆಸೆಗೆ ಮಹಿಳೆಯರ ಪರದಾಟ!
27 ವರ್ಷದ ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡ ಯುವಕ ಎನ್ನಲಾಗಿದೆ. ಆನ್ ಲೈನ್ನಲ್ಲಿ ಒನ್ ಟು ಡಬಲ್ ಹಣ ಆಗುತ್ತದೆ ಎಂದು ನಂಬಿ 91 ಸಾವಿರ ರೂಪಾಯಿ ಸಾಲ ಮಾಡಿ ಹಣ ತೊಡಗಿಸಿ ಮೋಸ ಹೋಗಿದ್ದ. ಹಣ ಪಾವಸ್ ಬಾರದ ಹಿನ್ನಲೆಯಲ್ಲಿ ಮನನೊಂದು ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾನೆ.
ಇನ್ನು ಇತ ಭದ್ರಾವತಿ ತಾಲೂಕಿನ ಮಾಚೇನಹಳ್ಳಿಯ ಶಾಹಿ ಎಕ್ಸ್ಪೋರ್ಟ್ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡಿಕೊಂಡಿದ್ದ. ಆನ್ ಲೈನ್ ಆ್ಯಪ್ಗಳನ್ನು ನಂಬಿ ಮೋಸ ಹೋಗಿ ಕೊನೆಯುಸಿರೆಳೆದಿದ್ದಾನೆ. ಈ ಕುರಿತು ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.