ವಿಜಯನಗರ:- ಕನ್ಯಾ ಕೊಡೋಕೆ ಯಾರು ಮುಂದೆ ಬರ್ತಿಲ್ಲ ಅಂತಾ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ ಜರುಗಿದೆ.
ಬಿ.ಮಧುಸೂದನ್ (26) ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡ ಯುವಕ. ಮದ್ವೆಗಾಗಿ ಮೃತ ಮಧುಸೂದನ್ ಮೂರು ಕನ್ಯಾ ನೋಡಿ ಬಂದಿದ್ದ. ಹುಡಗನ ತಂದೆ ವರ್ತನೆ ಸರಿಯಿಲ್ಲ ಅಂತಾ ಹುಡ್ಗಿ ಕಡೆಯವರು ನಿರಾಕರಣೆ ಮಾಡಿದ್ದಾರೆ.
ನನಗೆ ಮದ್ವೆನೇ ಅಗಲ್ಲ ಅಂತಾ ನೊಂದಿದ್ದ ಮಧುಸೂದನ್, ಕನ್ಯೆ ಸಿಗದ ಹಿನ್ನಲೆ, ಮದ್ಯಪಾನದ ಚಟಕ್ಕೆ ಬಿದ್ದಿದ್ದ. ಯುವಕನ ತಂದೆ ಅರೆ ಹುಚ್ಚನ ಹಾಗೇ ವರ್ತನೆ ಮಾಡುವ ಹಿನ್ನಲೆ, ಹುಡುಗಿಯ ಕಡೆಯವರು ವಾಪಾಸ್ ಆಗುತ್ತಿದ್ದಾರೆ.
ಮದ್ವೆ ಆಗ್ತಿಲ್ಲ ಅಂತಾ ಮನೊಂದು ಮಧುಸೂದನ್ ವಿಷ ಸೇವಿಸಿದ್ದ. ಜ.05 ರಂದು ವಿಷ ಕುಡಿದಿದ್ದ ಮಧುಸೂದನ್,ಬಳ್ಳಾರಿಯ ವಿಮ್ಸ್ನಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ.
ಚಿಕಿತ್ಸೆ ಫಲಿಸದೆ ಜ. 13 ರಂದು ಸಾವನ್ನಪ್ಪಿದ್ದಾನೆ. ಮಧುಸೂದನ್ನ ಚಿಕಿತ್ಸೆ ಪಡೆಯುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೆಣ್ಣು ಸಿಗ್ತಿಲ್ಲ , ಮದ್ವೆನೇ ಆಗಲ್ಲ ಅಂತಾ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೂಡ್ಲಿಗಿಯ ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.