ವಿಜಯಪುರ: ಪೊಲೀಸರ ವಿಚಾರಣೆಗೆ ಹೆದರಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ನಡೆದಿದೆ. ಮೌನೇಶ್ ಅಬ್ಬಿಹಾಳ (30) ಮೃತ ಯುವಕ ನೇಣಿಗೆ ಶರಣಾಗಿದ್ದಾನೆ.
ಶಿಕ್ಷಕಿ ಸತ್ತಿದ್ದು ಬೇರೆ ರೀಸನ್, ಗಂಡ ಹೇಳಿದ್ದು ಫೈನಾನ್ಸ್ ಕಾರಣ! ತನಿಖೆಯಲ್ಲಿ ಸಿಕ್ತು ಬಿಗ್ ಟ್ವಿಸ್ಟ್!
ಕಳೆದ ಕೆಲ ದಿನಗಳ ಹಿಂದೆ ಮೌನೇಶ ಸೋದರ ಮಾವ ಬಸವರಾಜ್ ಕಾಣೆಯಾಗಿದ್ದರು. ಈ ಸಂಬಂಧ ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಹಿನ್ನೆಲೆ ಮೌನೇಶನನ್ನು ಪೊಲೀಸರು ಕರೆದು ವಿಚಾರಣೆ ನಡೆಸಿ ಕಳುಹಿಸಿದ್ದರು. ಮತ್ತೆ ನಿನ್ನೆಯೂ ಮತ್ತೆ ವಿಚಾರಣೆಗೆ ಬರುವಂತೆ ಹೇಳಿದ್ದರು. ಇದೀಗ ಪೊಲೀಸರ ವಿಚಾರಣೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರ ಆರೋಪಿಸಿದ್ದಾರೆ.