ತುಮಕೂರು:- ನಗರದ ದೇವರಾಯಪಟ್ಟಣದಲ್ಲಿ ನಿಶ್ಚಿತಾರ್ಥದ ಉಂಗುರ ಕಳೆದು ಹೋಗಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
36 ವರ್ಷದ ಕಮಲೇಶ್ ಮೃತ ದುರ್ದೈವಿ. ನವೆಂಬರ್ 17ರಂದು ವಿಷ ಸೇವಿಸಿದ್ದರು, ಮಂಗಳವಾರ ರಾತ್ರಿ ಚಿಕಿತ್ಸೆಗೆ ಸ್ಪಂದಿಸದೆ ಜಿಲ್ಲಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ನ.21 ಮತ್ತು 22ರಂದು ವಿವಾಹ ನಡೆಯಬೇಕಿತ್ತು. ಮದುವೆಗೆ ಒಂದು ದಿನ ಬಾಕಿ ಇರುವಾಗಲೇ ಮೃತಪಟ್ಟಿದ್ದಾರೆ.
ಮೂರು ತಿಂಗಳ ಹಿಂದೆ ವಿವಾಹ ನಿಶ್ಚಯವಾಗಿತ್ತು. ನಿಶ್ಚಿತಾರ್ಥದ ಸಮಯದಲ್ಲಿ ನೀಡಿದ್ದ ಉಂಗುರ ಕಳೆದುಕೊಂಡಿದ್ದರು. ಇದನ್ನು ಮನೆಯವರಿಗೆ ತಿಳಿಸಲು ಹೆದರಿ ವಿಷ ಸೇವಿಸಿದ್ದರು