ದೊಡ್ಡಬಳ್ಳಾಪುರ:– ಹಳೇದ್ವೇಷಕ್ಕೆ ಸ್ನೇಹಿತರೆ ಯುವಕನ ಕತ್ತು ಕೊಯ್ದು ಕೊಲೆ ಮಾಡಿ ನಡುರಸ್ತೆಯಲ್ಲಿ ಬಿಸಾಕಿ ಹೋಗಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ..
ಆ ಪ್ರಜ್ವಲ್ ಪ್ರಕರಣ ಸಿಬಿಐಗೆ ಒಪ್ಪಿಸುವ ಅವಶ್ಯಕತೆಯಿಲ್ಲ: ಎಂಬಿ ಪಾಟೀಲ್!
ಕಾಲ್ ಮಾಡಿ ಕರೆಸಿಕೊಂಡ ಯುವಕರ ಗುಂಪಿ ಏಕಾಏಕಿ ಅಟ್ಯಾಕ್ ಮಾಡಿದೆ..ಅಟ್ಯಾಕ್ ನಲ್ಲಿ ಹೇಮಂತ್ ಕುಮಾರ್ (27) ಕೊಲೆಯಾದ ದುರ್ದೈವಿ..
ದೊಡ್ಡಬಳ್ಳಾಪುರ ಯಲಹಂಕ ರಸ್ತೆ ನವೋದಯ ಶಾಲೆ ಮುಂಭಾಗ ಬೆಳಗಿನ ಜಾವ ಶವ ಪತ್ತೆಯಾಗಿದೆ.. ಮಾರಕಾಸ್ತ್ರಗಳಿಂದ ಕೊಲೆ ಮಾಡಲಾಗಿದ್ದು, ಕುತ್ತಿಗೆ, ಎದೆಗೆ ಚಾಕುವಿನಿಂದ ಇರಿದ ಪರಿಣಾಮ ಹೇಮಂತ್ ತೀವ್ರ ರಕ್ತಸ್ರಾವವಾಗಿ ಪ್ರಾಣ ಬಿಟ್ಟಿದ್ದಾನೆ..
ಮಿಟ್ಟೆ @ ನರಸಿಂಹಮೂರ್ತಿ ಗ್ಯಾಂಗ್ ನ 10ಕ್ಕೂ ಹೆಚ್ಚು ಯುವಕರಿಂದ ಅಟ್ಯಾಕ್ ನಡೆದಿದೆ ಎನ್ನಲಾಗಿದ್ದು, ಕೊಲೆ ಮಾಡಿ ಶವನ ರಸ್ತೆ ಬದಿಯಲ್ಲಿ ಎಸೆದು ಹೋಗಲಾಗಿದೆ.. ಘಟನೆ ಗೊತ್ತಾಗುತ್ತಿದ್ದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದು, ಕೊಲೆ ಆರೋಪಿಗಳಿಗೆ ಬಲೆ ಬೀಸಿದ್ದಾರೆ..