ಯಾದಗಿರಿ: ಮೀಟರ್ ಬಡ್ಡಿ ದಂಧೆಕೋರರ ಅಟ್ಟಹಾಸಕ್ಕೆ ಯುವಕ ಬಲಿಯಾಗಿರುವ ಘಟನೆ ಯಾದಗಿರಿ ನಗರದ ಲಾಡೇಜ್ ಗಲ್ಲಿಯಲ್ಲಿ ನಡೆದಿದೆ. ಖಾಸೀಂ@ ಬಿಲ್ಲಿ ಮೃತ ಯುವಕನಾಗಿದ್ದು, ಖಾಸೀಂ ಯಾಸೀನ್ ಬಳಿ ಸಾಲ ಪಡೆದಿದ್ದ. ಆದರೆ 35 ಸಾವಿರ ಸಾಲ ಮರು ಪಾವತಿಸುವುದು ತಡವಾಗಿದ್ದಕ್ಕೆ ಯಾಸೀನ್ ಎಂಬಾತ ಖಾಸೀಂ ಮೇಲೆ ಹಲ್ಲೆ ನಡೆಸಿದ್ದಾನೆ.
ಕಳೆದ ಜ.19ನೇ ತಾರೀಖಿನಂದು ಸಾಲ ಮರುಪಾವತಿಸುವಂತೆ ಕೇಳಿದ್ದ ಯಾಸೀನ್, ಈ ವೇಳೆ ಖಾಸೀಂ ಸ್ವಲ್ಪ ದಿನ ಸಮಯ ಕೇಳಿದ್ದಾನೆ. ಇಷ್ಟಕ್ಕೆ ಖಾಸೀಂನನ್ನ ಬಾರುಕೋಲು, ಮೊಣಕಾಲಿನಿಂದ ಒದ್ದು ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಬಳಿಕ ಖಾಸೀಂನನ್ನ ಕುಟುಂಬಸ್ಥರು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಲಬುರಗಿ ಸರ್ಕಾರಿ ಆಸ್ಪತ್ರೆಯಲ್ಲಿ ಖಾಸೀಂ ಸಾವನ್ನಪ್ಪಿದ್ದಾನೆ. ಸದ್ಯ ಆರೋಪಿ ಯಾಸೀನ್ ವಿರುದ್ಧ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ.