ಚಿತ್ರದುರ್ಗ: ಮದುವೆ ಎಂಬುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ, ಭೂಮಿಯಲ್ಲಿ ಪೂರ್ಣಗೊಳ್ಳುತ್ತದೆ ಎಂಬ ಮಾತಿದೆ. ಅದರಂತೆ ಚಿತ್ರದುರ್ಗದಲ್ಲಿ ವಿಶೇಷ ವಿವಾಹ ನಡೆದಿದೆ. ದೂರದ ಅಮೆರಿಕಾ ದೇಶಕ್ಕೂ ಭಾರತಕ್ಕೂ ಸಂಬಂಧ ಕೂಡಿ ಬಂದಿದೆ. ಹೌದು ಚಿತ್ರದುರ್ಗ ಮೂಲದ ಅಭಿಲಾಷ್ ಹಾಗೂ ಅಮೇರಿಕಾ ಮೂಲದ ಕೆಲ್ಲಿ ವಿವಾಹ ಮಹೋತ್ಸವ ಭಾರತೀಯ ಸಂಪ್ರದಾಯದಂತೆ ಅದ್ದೂರಿಯಾಗಿ ನಡೆಯಿತು. ಚಿತ್ರದುರ್ಗ ಮೂಲದ ಯುವಕ ಅಭಿಲಾಷ್ ಅಮೇರಿಕಾದಲ್ಲಿ BNY ಬ್ಯಾಂಕ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ.
ಇನ್ನೋಂದೆಡೆ ಯುವತಿ ಕೆಲ್ಲಿ ಅಮೇರಿಕಾ ಮೂಲದ ಹೆಲ್ತ್ ಕೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅಮೇರಿಕಾದಲ್ಲೇ ಇದ್ದ ಇಬ್ಬರ ನಡುವೆ ಕೋವೀಡ್ ಸಂಧರ್ಭದಲ್ಲಿ ಪ್ರೇಮಾಂಕುರವಾಗಿತ್ತು. ಕಳೆದ ಐದಾರು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡಿದ್ದ ಅಭಿಲಾಷ್ – ಕೆಲ್ಲಿ ಚಿತ್ರದುರ್ಗದಲ್ಲಿ ಭಾರತೀಯ ಸಂಪ್ರದಾಯದಂತೆ ಸಪ್ತಪದಿ ತುಳಿದಿದ್ದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
Drumstick Tea Health Benefits: ನುಗ್ಗೆಸೊಪ್ಪಿನ ಚಹಾ ಕುಡಿಯೋದರಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ..?
ಈ ವಿಶೇಷ ವಿವಾಹ ಮಹೋತ್ಸವದಲ್ಲಿ ಅಮೇರಿಕಾ ಮೂಲದ ಕೆಲ್ಲಿ ಫ್ಯಾಮಿಲಿ ಹಾಗೂ ಸ್ನೇಹಿತರು ಕೂಡಾ ಭಾಗಿಯಾಗಿದ್ದು ಕೂಡಾ ವಿಶೇಷವಾಗಿತ್ತು. ಅಲ್ದೆ ಯುವತಿ ಕೆಲ್ಲಿ ಭಾರತೀಯ ನಾರಿಯಂತೆ ಸೀರೆಯಲ್ಲಿ ಪುಲ್ ಮಿಂಚಿದ್ರೆ, ಅವರ ಫ್ಯಾಮಿಲಿ ಪಂಚೆ ಹಾಗೂ ಮೈಸೂರು ಪೇಟ ಧರಿಸಿ ಎಂಜಾಯ್ ಮಾಡಿದ್ರು. ಇನ್ನೂ ಈ ವೇಳೆ ನವ ವಿವಾಹಿತೆ ಕೆಲ್ಲಿ ಕನ್ನಡದಲ್ಲೇ ಮಾತ್ನಾಡುವ ಮೂಲಕ ಎಲ್ಲರ ಮನ ಗೆದ್ದಳು.