ಬೆಂಗಳೂರು: ಮೂಕಪ್ರಾಣಿಗಳಿಗೆ ಒಮ್ಮೆ ಪ್ರೀತಿ ತೋರಿಸಿದರೆ ಸಾಕು ಸಾಯೋವರೆಗೂ ಮರೆಯುವುದಿಲ್ಲ. ಅದರಲ್ಲೂ ನಾಯಿ ನಿಯತ್ತಿನ ಪ್ರಾಣಿ, ಇದಕ್ಕೆ ಸಾಕ್ಷಿಯಾಗಿ ನಾವು ಎಷ್ಟೋ ಸುದ್ದಿಗಳನ್ನು ನೋಡಿದ್ದೇವೆ. ಒಂದು ಬಾರಿ ಸ್ನೇಹ ಬೆಳೆದರೆ ಶ್ವಾನಗಳು ಯಾವತ್ತು ಕೈ ಬಿಡಲ್ಲ. ಆದ್ರೆ ಮನೆಯಲ್ಲಿದ್ದ ಪ್ರೀತಿಯ ಸಾಕು ನಾಯಿ ಅನಾರೋಗ್ಯದಿಂದ ಸತ್ತ ಬೇಸರದಲ್ಲಿ ಅದೇ ನಾಯಿಯ ಚೈನ್ ಬಳಸಿ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬೆಂಗಳೂರು ಉತ್ತರ ತಾಲೂಕು ಹೆಗ್ಗಡದೇವನಪುರ ಗ್ರಾಮದಲ್ಲಿ ನಡೆದಿದೆ.
SIM Card New Rules: ಹೊಸ ಸಿಮ್ ಖರೀದಿಸೋ ಪ್ಲಾನ್ʼನಲ್ಲಿದ್ದೀರಾ..? ಹಾಗಿದ್ರೆ ಈ ರೂಲ್ಸ್ ತಿಳಿಯಲೇಬೇಕು
ರಾಜಶೇಖರ್ (33) ಮೃತ ಯುವಕನಾಗಿದ್ದು, ರಾಜಶೇಖರ್ 9 ವರ್ಷಗಳ ಹಿಂದೆ ‘ಬೌನ್ಸಿ’ ಎಂಬ ಹೆಸರು ನೀಡಿ ನಾಯಿಯನ್ನು ಖರೀದಿಸಿ ತಂದಿದ್ದರು. ಮಂಗಳವಾರ ‘ಬೌನ್ಸಿ’ ಅನಾರೋಗ್ಯದಿಂದ ಮೃತಪಟ್ಟಿತ್ತು. ತಮ್ಮ ಜಮೀನಿನಲ್ಲಿ ‘ಬೌನ್ಸಿ’ಯ ಅಂತ್ಯಸಂಸ್ಕಾರ ನೆರವೇರಿಸಿ ಮನೆಗೆ ಬಂದಿದ್ದ ರಾಜಶೇಖರ್ ಬುಧವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಬೆಳಗಿನ ಜಾವದಲ್ಲಿ ಮನೆಯೊಳಗೆ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಅವರ ದೇಹ ಪತ್ತೆಯಾಗಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ ಮತ್ತು ಮೃತದೇಹವನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ.