ತುಮಕೂರು: ಆನ್ಲೈನ್ ಗೇಮ್ ಜೀವನ-ಜೀವ ಎರಡನ್ನೂ ಹಾಳ್ ಮಾಡುತ್ತೆ ಹುಷಾರ್ ಅಂತ ಹಲವರು ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದರು ಕೂಡ ಇಲ್ಲೋರ್ವ ಆನ್ಲೈನ್ ಗೇಮ್ ಹುಚ್ಚಿಗೆ ಬದುಕನ್ನೇ ಕಳ್ಕೊಂಡಿದ್ದಾನೆ. ಹೌದು ಆನ್ಲೈನ್ ಗೇಮ್ ಆಡಬೇಡ ಅಂತ ಬುದ್ದಿ ಹೇಳಿದ್ದಕ್ಕೆ ಯುವಕನೊಬ್ಬ ನೇಣಿಗೆ ಶರಣಾಗಿರುವ ಘಟನೆ ತುಮಕೂರು ನಗರದ ಹೊರಪೇಟೆಯ ಬಾರ್ ಲೈನ್ ರಸ್ತೆಯಲ್ಲಿ ನಡೆದಿದೆ.
Gruha Lakshmi: ಗೃಹಲಕ್ಷ್ಮಿ ಹಣ ನಿಮಗೆ ಇನ್ನೂ ಬಂದಿಲ್ವಾ..? ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೊಟ್ರು ಗುಡ್ ನ್ಯೂಸ್
ಟಿ.ಎಸ್.ಭರತ್ (24) ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದು, ಇತ್ತೀಚೆಗೆ ಆನ್ಲೈನ್ ಗೇಮ್ನಲ್ಲಿ 20 ಸಾವಿರ ರೂ. ಹಣ ಕಳೆದುಕೊಂಡಿದ್ದ. ಈ ವಿಚಾರ ಆತನ ತಾಯಿಗೆ ಗೊತ್ತಾಗಿ ಇನ್ನೂ ಆನ್ಲೈನ್ ಗೇಮ್ ಆಡಬೇಡ ಎಂದು ಬುದ್ಧಿ ಹೇಳಿದ್ದರು.
ಇದೇ ವಿಚಾರಕ್ಕೆ ಯುವಕ ತನ್ನ ಮನೆ ಬಳಿಯ ಹಳೆ ಹೆಂಚಿನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.