ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾದಾಗಿನಿಂದ ಇಲ್ಲಿಯವರೆಗೂ ಸಾಕಷ್ಟು ಬಡ ಪ್ರತಿಭೆಗಳು ಬೆಳಕಿಗೆ ಬಂದಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ತಮ್ಮ ಮಿಂಚಿನ ಪ್ರದರ್ಶನದ ಮೂಲಕ ಕ್ರಿಕೆಟ್ ವೃತ್ತಿ ಜೀವನವನ್ನು ಅಂತಾರಾಷ್ಟ್ರೀಯ ಮಟ್ಟದವರೆಗೂ ವಿಸ್ತರಿಸಿಕೊಂಡಿರುವ ಹಲವು ಕ್ರಿಕೆಟಿಗರು ನಮ್ಮ ಕಣ್ಣ ಮುಂದೆ ಇದ್ದಾರೆ. ಅದರಂತೆ ಕೋಲ್ಕತಾ ನೈಟ್ ರೈಡರ್ಸ್ ತಂಡದ ರಿಂಕು ಸಿಂಗ್ ಕೂಡ ಒಬ್ಬರು. ಕಳೆದ 2022ರ ಐಪಿಎಲ್ ಟೂರ್ನಿಯಲ್ಲಿ ಗುರುತಿಸಿಕೊಂಡಿದ್ದ ರಿಂಕು ಸಿಂಗ್, ಹಲವು ಪಂದ್ಯಗಳಲ್ಲಿ ಕೆಕೆಆರ್ ತಂಡವನ್ನು ಗೆಲ್ಲಿಸಿದ್ದರು.
ಏನೇ ಮಾಡಿದ್ರೂ ಚಪಾತಿ ಮೃದುವಾಗಿ ಬರ್ತಿಲ್ವಾ: ಹಿಟ್ಟು ನಾದುವಾಗ, ಚಪಾತಿ ಮಾಡುವಾಗ ಈ ಟಿಪ್ಸ್ ಫಾಲೋ ಮಾಡಿ
ಇದೀಗ ಕೋಲ್ಕತ್ತಾ ನೈಟ್ ರೈಡರ್ಸ್ 13 ಕೋಟಿಗೆ ಉಳಿಸಿಕೊಂಡಿದೆ. ಇದರ ಬೆನ್ನಲ್ಲೇ ಐಷಾರಾಮಿ ಬಂಗಲೆಯನ್ನು ಕ್ರಿಕೆಟರ್ ಖರೀಸಿದ್ದಾರೆಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ವೈರಲ್ ಆಗಿದೆ. ಐಪಿಎಲ್ 2023 ರಲ್ಲಿ ಯಶ್ ದಯಾಳ್ ಬೌಲಿಂಗ್ಗೆ ಐದು ಸಿಕ್ಸರ್ಗಳನ್ನು ಚಚ್ಚಿದ ರಿಂಕು ಪವರ್-ಹಿಟ್ಟರ್ ಎಂದು ಖ್ಯಾತಿ ಗಳಿಸಿದರು. ರಿಂಕು ಸಿಂಗ್ ಈಗ ತಂಡದ ಅಗ್ರ ರೀಟೈನ್ ಆಗಿದ್ದಾರೆ. ಐಪಿಎಲ್ ಧಾರಣೆಯನ್ನು ಘೋಷಿಸಿದ ನಂತರ, ಅಲಿಘರ್ನ ಓಝೋನ್ ಸಿಟಿಯಲ್ಲಿರುವ ದಿ ಗೋಲ್ಡನ್ ಎಸ್ಟೇಟ್ನಲ್ಲಿ ಐಷಾರಾಮಿ ಬಂಗಲೆಯನ್ನು ಖರೀದಿಸಿದ್ದಾರೆ ಎನ್ನಲಾಗಿದೆ. ಇದು 500 ಚದರ ಗಜದ ಮನೆ ಮತ್ತು 3.5 ಕೋಟಿ ರೂ. ಮೌಲ್ಯದ್ದು ಎಂಬ ಸುದ್ದಿ ಹರಿದಾಡಿದೆ.
IPL ವಿಜೇತ ನಾಯಕ ಶ್ರೇಯಸ್ ಅಯ್ಯರ್ನನ್ನು ಈ ವರ್ಷ ತನ್ನ ಫ್ರಾಂಚೈಸಿ KKR ಗೆ ಪ್ರಶಸ್ತಿಯನ್ನು ಗೆದ್ದ ನಂತರವೂ ಕೈ ಬಿಡಲಾಗಿದೆ. 14 ಇನ್ನಿಂಗ್ಸ್ಗಳಲ್ಲಿ 146.86 ಸ್ಟ್ರೈಕ್ ರೇಟ್ನಲ್ಲಿ ಎರಡು ಅರ್ಧಶತಕಗಳೊಂದಿಗೆ 351 ರನ್ ಗಳಿಸಿದ ಅವರ ಬ್ಯಾಟಿಂಗ್ ಅಂಕಿಅಂಶಗಳು ಅಯ್ಯರ್ ಬಿಡುಗಡೆಯ ಹಿಂದಿನ ಕಾರಣವಾಗಿರಬಹುದು ಎಂಬ ವಾದವಿದೆ.
ಎಲ್ಲಾ ಫ್ರಾಂಚೈಸಿಗಳಲ್ಲಿ ಉಳಿಸಿಕೊಂಡಿರುವ ಒಟ್ಟು 46 ಆಟಗಾರರ ಪೈಕಿ 36 ಆಟಗಾರರು ಭಾರತೀಯರಾಗಿದ್ದಾರೆ. ಈ ಪೈಕಿ 10 ಆಟಗಾರರು ಅನ್ಕ್ಯಾಪ್ಡ್ ಇಂಡಿಯನ್ಸ್ ಸ್ಟಾರ್ಗಳು. ಅವರೆಂದರೆ, ಅಭಿಷೇಕ್ ಪೊರೆಲ್, ರಾಹುಲ್ ತೆವಾಟಿಯಾ, ಶಾರುಖ್ ಖಾನ್, ರಮಣದೀಪ್ ಸಿಂಗ್, ಹರ್ಷಿತ್ ರಾಣಾ, ಮೊಹ್ಸಿನ್ ಖಾನ್, ಆಯುಷ್ ಬಡೋನಿ, ಶಶಾಂಕ್ ಸಿಂಗ್, ಪ್ರಭ್ಸಿಮ್ರಾನ್ ಸಿಂಗ್, ಯಶ್ ದಯಾಲ್.