ಕೋಲಾರ: ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ, ಕೋಲಾರ ನಗರಕ್ಕೆ ಹೊಂದಿಕೊಂಡಿರುವ ಕೋಲಾರಮ್ಮ ಕೆರೆಯಲ್ಲಿ ಮಹಿಳೆ ಶವವೊಂದು ನೀರಿನಲ್ಲಿ ತೇಲುತ್ತಿರುವ ವಿಷಯನ್ನು ನೋಡಿದ ಸ್ಥಳಿಯರು ಗಲ್ ಪೇಟೆ ಪೋಲೀಸ್ ಠಾಣೆಗೆ ತಿಳಿಸಿದ್ದಾರೆ.
Hubballi: ಆನಂದನಗರ ಅಂಬಾಭವಾನಿ ಗುಡಿ ಬಳಿ ನಡೆದ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು!
ಕೂಡಲೇ ಸ್ಥಳಕ್ಕೆ ದಾವಿಸಿದ ಪೋಲೀಸರು ಮಹಿಳೆಯ ಶವವನ್ನು ಅಗ್ನಿಶಾಮಕ ದಳದ ಸಿಬ್ಬಂದಿಯ ಸಹಕಾರ ಪಡೆದು ನೀರಿನಿಂದ ಹೊರಗೆ ತೆಗೆದಿದ್ದಾರೆ. ಸತತ ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಪೋಲೀಸರು ಕೆರೆಯಲ್ಲಿ ತೇಲುತ್ತಿದ್ದ ಮಹಿಳೆಯ ಶವವನ್ನು ಹೊರತೆಗೆದು ಪರಿಶೀಲನೆ ನಡೆಸಿದ್ದು ಈ ವೇಳೆ ಮೃತ ಮಹಿಳೆ ಟಮಕಾ ಬಡಾವಣೆಯ ಆಶಾ(೨೫) ಎಂದು ಗುರುತಿಸಲಾಗಿದೆ.
ಮೃತ ಆಶಾ ಕಳೆದ ನವೆಂಬರ್ ೨೭ ರಂದು ಮನೆಯಿಂದ ಕಾಣೆಯಾಗಿದ್ದು ಕುಟುಂಬಸ್ಥರು ಗಲ್ ಪೇಟೆ ಪೋಲಿಸ್ ಠಾಣೆಯಲ್ಲಿ ಕಾಣೆಯಾಗಿದ್ದ ಮಹಿಳೆಯ ಪತ್ತೆಗಾಗಿ ದೂರು ನೀಡಿದ್ದರು ಪ್ರಕರಣ ದಾಖಲಿಸಿಕೊಂಡ ಪೋಲೀಸರು ಮಹಿಳೆಯ ಪತ್ತೆಗಾಗಿ ಮುಂದಾಗಿದ್ದರು ಆದರೆ ಕೋಲಾರಮ್ಮ ಕೆರೆಯಲ್ಲಿ ಕಂಡು ಬಂದ ಮಹಿಳೆಯ ಶವ ಕುರಿತು ಹಲವು ಅನುಮಾನಗಳ ಪೋಲೀಸರಿಗೆ ಮೂಡಿತ್ತು ಮೊದಲಿಗೆ ಕೊಲೆ ಮಾಡಿ ಬಿಸಾಡಿ ಹೋಗಿರಬಹುದು ಎಂದು ಪೋಲೀಸರು ಅಂದಾಜಿಸಿದ್ದರು
ಆದರೆ ಮೃತ ಮಹಿಳೆಯ ಶವವನ್ನು ಹೊರತೆಗೆದ ನಂತರ ಗುರುತು ಪತ್ತೆಯಾಗಿದ್ದು ಕೂಡಲೇ ಆಶಾ ಕುಟುಂಬಸ್ಥರಿಗೆ ಪೋಲೀಸರು ಮಾಹಿತಿ ನೀಡಿದ್ದಾರೆ ಸ್ಥಳಕ್ಕೆ ಆಗಮಿಸಿದ ಕುಟುಂಬಸ್ಥರ ಆಶಾ ಮೃತ ಶವವನ್ನು ಕಂಡು ಆಕ್ರಂದನ ಮುಗಿಲು ಮುಟ್ಟಿತ್ತು. ಕೌಟುಂಬಿಕ ಕಲಹ ಹಿನ್ನೆಲೆ ಬೇಸತ್ತು ನ.೨೭ ರಂದು ಮನೆ ಬಿಟ್ಟು ಹೋಗಿ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರಬಹುದು ಎನ್ನಲಾಗಿದೆ. ಆದರೆ ಪೋಲೀಸರ ತನಿಖೆಯಿಂದ ಆಶಾ ಸಾವಿಗೆ ಕಾರಣ ಏನಿರಬಹುದು ಎನ್ನುವ ಸತ್ಯ ಹೊರಬೀಳಬೇಕಾಗಿದೆ. ಸದ್ಯ ಮೃತ ಆಶಾ ಶವವನ್ನು ಮರಣೋತ್ತರ ಪರೀಕ್ಷೆಗೆ ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ರವಾನಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಗಲ್ ಪೇಟೆ ಪೋಲಿಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅರುಣ್ ಗೌಡ ಪಾಟೀಲ್, ಸೇರಿದಂತೆ ಸಿಬ್ಬಂದಿಗಳು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಭಾಗಿಯಾಗಿದ್ದರು.