ಬೆಂಗಳೂರು: ಮಹಿಳೆಯೊಬ್ಬಳು ನಕಲಿ ಟಿಕೆಟ್ ತೋರಿಸಿ ವಿಮಾನ ನಿಲ್ದಾಣದ ಒಳಗೆ ಪ್ರವೇಶಿಸಿದ ಘಟನೆ ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ (Kempegowda International Airport) ನಡೆದಿದೆ.
ದೀರ್ಘಕಾಲದ ಸಂದಿ ನೋವು & ವಯಸ್ಸಾದಂತೆ ಈ ನೋವುಗಳು ನಿಮ್ಮನ್ನ ಕಾಡುತ್ತಿದ್ದರೆ: ಇಲ್ಲಿದೆ ಉಚಿತ – ಸಲಹೆ, ಸರಳ ಚಿಕಿತ್ಸೆ
ಅಕ್ರಮವಾಗಿ ವಿಮಾನ ನಿಲ್ದಾಣ ಪ್ರವೇಶಿಸಿದ್ದ ಮಹಿಳೆಯನ್ನು ಹರ್ಪಿತ್ ಕೌರ್ ಸೈನಿ ಎಂದು ಗುರುತಿಸಲಾಗಿದೆ. ಮಹಿಳೆ ಆಯುಷ್ ಶರ್ಮ ಎಂಬಾತನನ್ನು ವಿಮಾನ ನಿಲ್ದಾಣಕ್ಕೆ ಬಿಡಲು ಬಂದಿದ್ದಳು. ಈ ವೇಳೆ ನಕಲಿ ಟಿಕೆಟ್ ತೋರಿಸಿ ಪಿಇಎಸ್ಸಿವರೆಗೂ ಹೋಗಿದ್ದಳು. ಬಳಿಕ ಲ್ಯಾಪ್ಟಾಪ್ ಕಳೆದುಹೋಗಿದೆ ಎಂದು ಹೊರಗೆ ಬಂದಿದ್ದಳು. ಈ ವೇಳೆ ಅನುಮಾನಗೊಂಡ ಸಿಬ್ಬಂದಿ ಟಿಕೆಟ್ ಪರಿಶೀಲನೆ ನಡೆಸಿದಾಗ ನಕಲಿ ಟಿಕೆಟ್ ಎನ್ನುವುದು ತಿಳಿದು ಬಂದಿದೆ.
ಈ ಸಂಬಂಧ ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸ್ (Police) ಠಾಣೆಯಲ್ಲಿ ಎಫ್ಐಆರ್ (FIR) ದಾಖಲಾಗಿದೆ. ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.