ಮೆಜೆಸ್ಟಿಕ್ ನಲ್ಲಿ ಪತ್ತೆಯಾದ ಕಳಪೆ ಮಾಂಸ ದಂಧೆ ವಿಚಾರ ಇಡೀ ಬೆಂಗಳೂರಿನ ಜನರನ್ನ ಬೆಚ್ಚಿ ಬೀಳಿಸಿದೆ.. ರಾಜಸ್ತಾನದಿಂದ ಬಂದಿದ್ದು ಮೇಕೆ ಮಾಂಸವೇ? ನಾಯಿಯ ದೇಹದಂತೆ ಇರುವ ಮೇಕೆಯ ದೇಹವನ್ನು ನೋಡಿ ಗೊಂದಲ ಸೃಷ್ಟಿ ಆಗಿದ್ಯಾ ಎಂಬ ಅನುಮಾನ ಈಗ ಎದ್ದಿದೆ. ರಾಜಸ್ಥಾನದ ಶಿರೋಹಿ ಮೇಕೆ ಮಾಂಸ ಬೆಂಗಳೂರಿಗೆ ಬಂದಿರಬಹುದು. ಶಿರೋಹಿ ಮೇಕೆಗಳ ದೇಹ ರಚನೆ ಚರ್ಮವಿಲ್ಲದ್ದಾಗ ನಾಯಿ ದೇಹದ ಆಕಾರಕ್ಕೆ ಹೋಲಿಕೆಯಾಗುತ್ತದೆ. ಇದರಿಂದಾಗಿ ಈ ಗೊಂದಲ ಸೃಷ್ಟಿ ಆಗಿರಬಹುದು ಎಂಬ ಮಾತುಗಳು ಈಗ ಕೇಳಿ ಬರುತ್ತಿದೆ.
ಆಹಾರ ಇಲಾಖೆಯ ಆಯುಕ್ತರು ಮೇಲ್ನೋಟಕ್ಕೆ ಇದು ನಾಯಿಯಲ್ಲ ಎಂದಿದ್ದರು. ಆದರೆ ಸಾಮಾಜಿಕ ಜಾಲತಾಣದಲ್ಲಿ ನಾಯಿ ದೇಹ ರಚನೆ ಹೊಂದಿರುವ ಮಾಂಸದ ಚಿತ್ರ ವೈರಲ್ ಆಗುತ್ತಿತ್ತು. ಅಲ್ಲದೇ ಮುಸ್ಲಿಮರಾದ ನಾವು ನಾಯಿಯನ್ನು ಮುಟ್ಟಿಸಿಕೊಳ್ಳುವುದೂ ಇಲ್ಲ, ಅಂತಹದ್ರಲ್ಲಿ ನಾಯಿಮಾಂಸವನ್ನು ಪೂರೈಸುತ್ತೇವಾ ಎಂದು ಪ್ರಶ್ನಿಸಿದ್ದರು.
ಈರುಳ್ಳಿ ಕತ್ತರಿಸಬೇಕಾದ್ರೆ ಕಣ್ಣೀರು ಬರಬಾರದು ಅಂದ್ರೆ ಹೀಗೆ ಮಾಡಿ ಸಾಕು.!
ವರದಿಗಳ ಪ್ರಕಾರ, ರಾಜಸ್ಥಾನದ ಶಿರೋಹಿ ಮೇಕೆ ಮಾಂಸ ಬಾಕ್ಸ್ ನಲ್ಲಿತ್ತು ಎಂದು ಹೇಳಲಾಗುತ್ತಿದೆ. ಶಿರೋಹಿ ಮೇಕೆಗಳ ದೇಹ ರಚನೆ ಚರ್ಮವಿಲ್ಲದ್ದಾಗ ನಾಯಿ ದೇಹದ ಆಕಾರಕ್ಕೆ ಹೋಲಿಕೆಯಾಗುತ್ತದೆ. ಇದರಿಂದಾಗಿ ಈ ಗೊಂದಲ ಸೃಷ್ಟಿಯಾಗಿದೆ ಎಂದು ಹೇಳಲಾಗಿದೆ. ಇನ್ನೂ ಆಹಾರ ಇಲಾಖೆಯವರು ಕೂಡ ಇದು ಮೇಲ್ನೋಟಕ್ಕೆ ನಾಯಿಯಲ್ಲ ಎಂದಿದ್ದರು. ಆದರೆ, ಪುನೀತ್ ಕೆರೆಹಳ್ಳಿ ಟೀಮ್ ಸೃಷ್ಟಿಸಿದ ಗೊಂದಲದಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಇದು ನಾಯಿ ಮಾಂಸ ಎಂದೇ ಪ್ರತಿಪಾದಿಸುವ ಪೋಸ್ಟರ್ ಗಳು ವ್ಯಾಪಕವಾಗಿ ಹರಿದಾಡುತ್ತಿದೆ.
ಮತ್ತೊಂದ್ ಕಡೆ ತೊಂಭತ್ತು ಮಾಂಸದ ಬಾಕ್ಸ್ ಗಳನ್ನ ಪೊಲೀಸರು ಜಪ್ತಿ ಮಾಡಿದ್ದಾರೆ.. ಈಗಾಗಲೇ ಮಾಂಸದ ಸ್ಯಾಂಪಲ್ ಗಳನ್ನ ಲ್ಯಾಬ್ ಗೆ ಕಳಿಸಲಾಗಿದ್ದು ಪರಿಶೀಲನೆ ನಡೆಸಲಾಗ್ತಿದೆ.. ಅಷ್ಟಕ್ಕೂ ಬಾಕ್ಸ್ ನಲ್ಲಿರೋ ಮಾಂಸ ನಿಜಕ್ಕೂ ಬೇರೆ ಪ್ರಾಣಿಯದ್ದಾ..? ಆ ಮಾಂಸದ ಕ್ವಾಲಿಟಿ ಏನು..? ಈ ಬಗ್ಗೆ ಹೆಚ್ಚಿನ ತನಿಖೆ ನಡೀತಿದೆ.. ತನಿಖೆ ನಡೆದ್ಮೇಲೆಯೇ ಅಸಲಿ ಸತ್ಯ ಬಯಲಾಗಲಿದೆ. ಕಾನೂನು ನಿಯಮ ಮೀರಿದ್ರೆ ಅಬ್ದುಲ್ ರಜಾಕ್ ಗೆ ಕಾನೂನು ಸಂಕಷ್ಟ ಎದುರಾಗಲಿದೆ. ನಿಯಮ ಉಲ್ಲಂಘನೆ ಮಾಡಿದ್ರೆ ಏಳು ವರ್ಷದವರೆಗೆ ಜೈಲು ಶಿಕ್ಷೆ ಸಾಧ್ಯತೆ ಇದೆ.